ಕರ್ನಾಟಕ

karnataka

ETV Bharat / state

ಜಲಾಶಯಗಳು ಭರ್ತಿ, ತುಂಬಿ ಹರಿಯುತ್ತಿವೆ ನದಿಗಳು: ಕಣ್ತುಂಬಿಕೊಳ್ಳಲು ಹರಿದು ಬರುತ್ತಿದೆ ಜನಸಾಗರ - kannad news

ನಿರೀಕ್ಷೆಗಿಂತ ಹೆಚ್ಚಿನ ಮಳೆಯಾದ್ದರಿಂದ ಯಾದಗಿರಿ ಜಿಲ್ಲೆಯ ಪ್ರಮುಖ ನದಿಗಳಾದ ಕೃಷ್ಣಾ ಹಾಗೂ ಭೀಮಾ ತುಂಬಿ ಹರಿಯುತ್ತಿದ್ದು, ಬಸವಸಾಗರ ಜಲಾಶಯ ಭರ್ತಿಯಾಗಿದೆ. ಈ ಹಿನ್ನೆಲೆ ಮನಮೋಹಕ ಜಲ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ವಿವಿಧ ಕಡೆಗಳಿಂದ ಜನರ ದಂಡೇ ಹರಿದು ಬರುತ್ತಿದೆ.

ಯಾದಗಿರಿ: ಜಲಾಶಯಗಳು ಭರ್ತಿ, ಕಣ್ತುಂಬಿಕೊಳ್ಳಲು ಹರಿದು ಬರುತ್ತಿದೆ ಜನಸಾಗರ

By

Published : Aug 11, 2019, 11:36 PM IST

ಯಾದಗಿರಿ: ಬಿಡದೆ ಸುರಿದ ಮಳೆಯ ಹಿನ್ನೆಲೆ ಜಿಲ್ಲೆಯ ಕೃಷ್ಣಾ ಹಾಗೂ ಭೀಮಾ ನದಿಗಳು ಉಕ್ಕಿ ಹರಿಯುತ್ತಿದ್ದು, ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಅತಿಯಾದ ಮಳೆ ಹಿನ್ನೆಲೆ ಜಲಾಶಯಗಳು ತುಂಬಿದ್ದು, ಬಸವಸಾಗರ ಜಲಾಶಯದ ಒಳಹರಿವು ಹೆಚ್ಚಾದ ಹಿನ್ನೆಲೆ ಕೃಷ್ಣಾ ನದಿಗೆ 6,11, 230 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಜೊತೆಗೆ ಉಜನಿ ಜಲಾಶಯದಿಂದ ಸೊನ್ನತಿ ಬ್ಯಾರೇಜ್​​ಗೆ ನೀರು ಬಿಡುತ್ತಿರುವ ಹಿನ್ನೆಲೆ ಭೀಮಾ‌ ನದಿಯ ಒಳಹರಿವು ಹೆಚ್ಚಾಗಿದೆ. ಹೀಗಾಗಿ ಜಿಲ್ಲೆಯ ಎರಡೂ ನದಿಗಳು ತುಂಬಿ ಹರಿಯುತ್ತಿದ್ದು, ಮನಮೋಹಕ ಜಲ ವೈಭವವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಇದರಿಂದಾಗಿ ನದಿ ತೀರಗಳು ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಟ್ಟಿವೆ.

ಜಲಾಶಯಗಳ ಮನಮೋಹಕ ದೃಶ್ಯ

ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯವನ್ನು ನೋಡಲು ಬಿಜಾಪುರ, ಮುದ್ದೇಬಿಹಾಳ, ಬಾಗಲಕೋಟೆ, ರಾಯಚೂರು ಸೇರಿದಂತೆ ವಿವಿಧ ಕಡೆಗಳಿಂದ ಸಹಸ್ರಾರು ಜನರು ವೀಕ್ಷಣೆಗೆಂದು ಆಗಮಿಸುತ್ತಿದ್ದಾರೆ. ಆದ್ದರಿಂದ ಬಸವಸಾಗರ ಜಲಾಶಯವನ್ನು ಸರ್ಕಾರ ಪ್ರೇಕ್ಷಣೀಯ ತಾಣವಾಗಿ ಅಭಿವೃದ್ಧಿ ಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ABOUT THE AUTHOR

...view details