ಕರ್ನಾಟಕ

karnataka

ETV Bharat / state

2 ಸಾವಿರ ಲಂಚಕ್ಕೆ ಕೈಯೊಡ್ಡಿದ ಭೂಮಾಪನ ಅಧಿಕಾರಿ ಎಸಿಬಿ ಬಲೆಗೆ

ಭೂಮಾಪನ ಅಧಿಕಾರಿ ರಘುರಾಮ್ ಎಂಬುವವರು ಲಂಚ ಆಪಾದನೆಯಡಿ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಂಜು ಚವ್ಹಾಣ್​ ಎಂಬುವವರ ಜಮೀನು ಅಳತೆ ವಿಚಾರವಾಗಿ ಅಧಿಕಾರಿ ರಘುರಾಮ್ ಐದು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಬಂದಿತ್ತು.

ರಘುರಾಮ್
ರಘುರಾಮ್

By

Published : Feb 10, 2021, 3:55 AM IST

ಯಾದಗಿರಿ:ಜಮೀನು ಅಳತೆ ಮಾಡಿಕೊಡಲು ಲಂಚದ ಬೇಡಿಕೆ ಇರಿಸಿದ ಅಧಿಕಾರಿಯೊಬ್ಬರು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲಿಗೆ ಬಿದ್ದಿದ್ದಾರೆ.

ಭೂಮಾಪನ ಅಧಿಕಾರಿ ರಘುರಾಮ್ ಎಂಬುವವರು ಲಂಚ ಆಪಾದನೆಯಡಿ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಂಜು ಚವ್ಹಾಣ್​ ಎಂಬುವವರ ಜಮೀನು ಅಳತೆ ವಿಚಾರವಾಗಿ ಅಧಿಕಾರಿ ರಘುರಾಮ್ ಐದು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಬಂದಿತ್ತು.

ಇದನ್ನೂ ಓದಿ: ಯುವತಿಗೆ ವಿಷವುಣಿಸಿ ಕೊಲೆಗೆ ಯತ್ನಿಸಿದ ಯುವಕ: ಪೊಲೀಸರಿಗೆ ದೂರು ನೀಡಿದ ಪೋಷಕರು

ಮಂಗಳವಾರ ನಗರದ ಹೊಸಳ್ಳಿ ಕ್ರಾಸ್ ಬಳಿ ಇರುವ ಹೋಟೆಲ್ ಒಂದರಲ್ಲಿ ಸಂಜು ಚವ್ಹಾಣ್​ ಅವರಿಂದ ಮುಂಗಡವಾಗಿ 2 ಸಾವಿರ ರೂ. ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಲಬುರಗಿ ಎಸಿಬಿ ಎಸ್ ಪಿ ಮಹೇಶ್ ಮೇಘಣ್ಣವರ್ ನೇತ್ರತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ, ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಯಾದಗಿರಿಯಲ್ಲಿ ಎಸಿಬಿ ದಾಳಿ

ABOUT THE AUTHOR

...view details