ಯಾದಗಿರಿ:ಹೋಳಿ ಹುಣ್ಣಿಮೆ ಅಂಗವಾಗಿ ಗೆಳೆಯರೊಂದಿಗೆ ಬಣ್ಣದಾಟ ಆಡಿ ಗ್ರಾಮದ ಹೊರವಲಯದಲ್ಲಿರುವ ಕೆರೆಯಲ್ಲಿ ಸ್ನಾನ ಮಾಡಲು ಹೋದ ಯುವಕರಿಬ್ಬರು ಮೃತಪಟ್ಟಿದ್ದಾರೆ. ಈಜು ಬಾರದ ಕಾರಣ ಇಬ್ಬರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಈ ಘಟನೆ ಯಾದಗಿರಿ ತಾಲೂಕಿನ ಬಾಚವಾರ ಗ್ರಾಮದಲ್ಲಿ ಶನಿವಾರ ನಡೆದಿದೆ.
ಮಾರ್ತಂಡಪ್ಪ(19), ಸಾಬಣ್ಣ (18) ಕೆರೆಯಲ್ಲಿ ಮುಳುಗಿ ಮೃತಪಟ್ಟ ಯುವಕರು. 12ಕ್ಕೂ ಹೆಚ್ಚು ಜನರ ಗುಂಪಿನ ಯುವಕರು ಎಂದಿನಂತೆ ಹೋಳಿ ಹುಣ್ಣಿಮೆ ಅಂಗವಾಗಿ ಬಣ್ಣದಾಟ ಆಡಿ, ಸ್ನಾನ ಮಾಡಲು ಗ್ರಾಮದ ಹೊರವಲಯದ ಕೆರೆಗೆ ಹೋಗಿದ್ದಾರೆ. ಆದ್ರೆ ಈಜಲು ಬಾರದೆ ಇವರಿಬ್ಬರು ಮೃತಪಟ್ಟಿದ್ದಾರೆ.