ಕರ್ನಾಟಕ

karnataka

ETV Bharat / state

ಹೊಸ ವರ್ಷಾಚರಣೆಗೆ ಕ್ಷಣಗಣನೆ: ಶಾಂತಿಯುತ ಆಚರಣೆಗೆ ಯಾದಗಿರಿ ಎಸ್​ಪಿ ಕರೆ.. - Yadagiri news year news

ಹೊಸವರ್ಷಾಚರಣೆಗೆ ಯಾದಗಿರಿ ಜಿಲ್ಲೆಯ ಜನ ಸಿದ್ಧತೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಗಲಾಟೆ-ಗದ್ದಲ ಮಾಡುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನಾವಣೆ ಎಚ್ಚರಿಸಿದ್ದಾರೆ.

ಯಾದಗಿರಿ ಎಸ್​ಪಿ, Yadagiri SP request to celebrate new year peacefully
ಯಾದಗಿರಿ ಎಸ್​ಪಿ

By

Published : Dec 31, 2019, 7:20 PM IST

Updated : Dec 31, 2019, 7:26 PM IST

ಯಾದಗಿರಿ:ಹೊಸ ವರ್ಷ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಯಾದಗಿರಿ ಜಿಲ್ಲೆಯ ಜನರು ಶಾಂತಿಯುತವಾಗಿ ಸಂಭ್ರಮಾಚರಣೆ ಮಾಡುವಂತೆ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನಾವಣೆ ಮನವಿ ಮಾಡಿದ್ದಾರೆ.

ಇಂದು ಮಧ್ಯರಾತ್ರಿ 12 ಗಂಟೆಗೆ ಹೊಸವರ್ಷ 2020 ಆರಂಭವಾಗಲಿದ್ದು, ಜಿಲ್ಲೆಯ ಜನ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಯಾವುದೇ ಗಲಾಟೆ-ಗದ್ದಲ ಮಾಡದೆ, ಶಾಂತಿಯುತವಾಗಿ ಕೇಕ್ ಕತ್ತರಿಸಿ ಸಂಭ್ರಮಿಸಿ. ಆದರೆ, ಸಂಭ್ರಮಾಚಾರಣೆ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವುದು, ಪಾನಮತ್ತರಾಗಿ ವಾಹನ ಚಾಲಾಯಿಸುವುದು, ತ್ರಿಪಲ್ ರೈಡ್​ ಮಾಡುವುದು ​ಅಪರಾಧ. ಗಲಾಟೆ-ಗದ್ದಲ ಮಾಡುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಸೋನಾವಣೆ ಎಚ್ಚರಿಸಿದ್ದಾರೆ.

ಹೊಸ ವರ್ಷದ ಸಂಭ್ರಮದ ವೇಳೆ ಅಹಿತಕರ ಘಟನೆ ತಡೆಗಟ್ಟಲು ಜಿಲ್ಲೆಯ ವಿವಿಧೆಡೆ ಬಿಗಿ ಪೊಲೀಸ್ ಬಂದೋಬಸ್ತ್​ ಕೈಗೊಳ್ಳಲಾಗಿದೆ. 10ಕ್ಕೂ ಹೆಚ್ಚು ಚೆಕ್​ಪೋಸ್ಟ್​ಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಷ್ ಭಗವಾನ್ ತಿಳಿಸಿದ್ದಾರೆ‌.

Last Updated : Dec 31, 2019, 7:26 PM IST

ABOUT THE AUTHOR

...view details