ಯಾದಗಿರಿ : ಕುರಿ ಮೇಯಿಸಲು ಹೋಗಿ ಡಂಬರಗಡ್ಡಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿಯನ್ನು ರಕ್ಷಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.
ನಡುಗುಡ್ಡೆಯಲ್ಲಿ ಸಿಲುಕಿದ್ದ ಕುರಿಗಾಯಿ ರಕ್ಷಣೆ... ಹೇಗಿತ್ತು ಕಾರ್ಯಾಚರಣೆ?
ಜಿಲ್ಲೆಯ ಹುಣಸಗಿ ತಾಲೂಕಿನ ಜುಮಾಲಪುರ ಗ್ರಾಮದ ಕುರಿಗಾಯಿ ತುಂಬಿ ಹರಿಯುತ್ತಿದ್ದ ಕೃಷ್ಣಾ ನದಿಯಲ್ಲಿ ತೆಪ್ಪದ ಮೂಲಕ ಕುರಿ ಮೇಯಿಸಲು ಹೊಗಿ ನಡುಗಡ್ಡೆಯಲ್ಲಿ ಸಿಲುಕಿದ್ದರು. ಪ್ರವಾಹ ತಗ್ಗಿದ್ದು ಕುರಿಯಗಾಯಿಯನ್ನು ರಕ್ಷಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.
ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದ ಹಿನ್ನೆಲೆ ಯಾದಗಿರಿ ಜಿಲ್ಲೆಯ ನದಿ ಪಾತ್ರದ ಜನರಿಗೆ ನದಿ ತಡಕ್ಕೆ ತೆರಳದಂತೆ ಜಿಲ್ಲಾಡಳಿತದಿಂದ ಹೈ ಅಲರ್ಟ್ ಘೋಷಣೆ ಮಾಡಿತ್ತು. ಆದರೆ ಜಿಲ್ಲಾಡಳಿತ ಆದೇಶವನ್ನು ಲೆಕ್ಕಿಸದೇ ಹುಣಸಗಿ ತಾಲೂಕಿನ ಜುಮಲಾಪುರ ಗ್ರಾಮದ ಕುರಿಗಾಯಿ ಶಿವಪ್ಪ ತುಂಬಿ ಹರಿಯುತ್ತಿದ್ದ ಕೃಷ್ಣಾ ನದಿಯಲ್ಲಿ ತೆಪ್ಪದ ಮೂಲಕ ಕುರಿ ಮೇಯಿಸಲು ಹೊಗಿದ್ದ.
ನದಿ ಪ್ರವಾಹ ಹೆಚ್ಚಾಗಿದ್ದರಿಂದ ಕುರಿಗಾಯಿ ಡಂಬರಗಡ್ಡಿಯ ನಡುಗಡ್ಡೆಯಲ್ಲಿ ಕಳೆದ ಮೂರು ದಿನಗಳಿಂದ ಸಿಲುಕಿಕೊಂಡು ಪ್ರಾಣ ಕೈಯಲ್ಲಿ ಹಿಡಿದು ಕುಂತಿದ್ದ. ಇಂದು ನೀರಿನ ಪ್ರಮಾಣ ಕಡಿಮೆಯಾಗಿದ್ದು, ತಕ್ಷಣ ಹುಣುಸಗಿ ತಹಶಿಲ್ದಾರ್ ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ನುರಿತ ಮೀನುಗಾರರಿಂದ ತೆಪ್ಪದ ಮೂಲಕ ಕುರಿಗಾಯಿ ಶಿವಪ್ಪನನ್ನು ರಕ್ಷಣೆ ಮಾಡಿಸಲಾಗಿದೆ.