ಯಾದಗಿರಿ: ಸಾಂಸ್ಥಿಕ ಕ್ವಾರಂಟೈನ್ ಅವಧಿ ಮುಗಿದರೂ ನಮ್ಮನ್ನ ಮನೆಗೆ ಕಳುಹಿಸಿ ಕೊಡುತ್ತಿಲ್ಲ ಎಂದು ಕ್ವಾರೆಂಟೆನ್ ಕೇಂದ್ರ ಒಂದರಲ್ಲಿದ್ದ ವಲಸೆಕಾರ್ಮಿಕರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ನಮ್ಮನ್ನ ಮನೆಗೆ ಕಳುಹಿಸಿ ಕೊಡದಿದ್ದರೆ ಈ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿಬಿಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಲಾಕ್ ಡೌನ್ ಸಡಿಲಿಕೆ ನಂತರ ಇತ್ತೀಚೆಗೆ ಮಹರಾಷ್ಟ್ರದಿಂದ ಆಗಮಿಸಿದ ನೂರಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನ ಶಹಪುರ ಪಟ್ಟಣದ ಆದರ್ಶ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಕ್ವಾರೆಂಟೆನ್ ಮಾಡಲಾಗಿತ್ತು.