ಯಾದಗಿರಿ: ಶ್ರೀಮಂತಿಕೆ ಜೊತೆಗೆ ವಿದ್ಯಾವಂತೆಯಾಗಿದ್ದ 24 ವರ್ಷದ ಯುವತಿಯೊಬ್ಬಳು ಸಂಸಾರಿಕ ಜೀವನವನ್ನು ತ್ಯಾಗ ಮಾಡಿ ಸನ್ಯಾಸತ್ವ ದೀಕ್ಷೆ ಪಡೆಯಲು ಮುಂದಾಗಿದ್ದಾರೆ.
ಆಗರ್ಭ ಶ್ರೀಮಂತಿಗೆ ಜೊತೆಗೆ ವಿದ್ಯೆ ಇದ್ದರೂ ಸನ್ಯಾಸಿಯಾಗಲು ಹೊರಟ 24ರ ಯುವತಿ! - yadagiri girl taken Asceticism
ಶ್ರೀಮಂತಿಕೆ ಜೊತೆಗೆ ವಿದ್ಯಾವಂತೆಯಾಗಿದ್ದ 24 ವರ್ಷದ ಯುವತಿಯೊಬ್ಬಳು ಸಂಸಾರಿಕ ಜೀವನವನ್ನು ತ್ಯಾಗ ಮಾಡಿ ಸನ್ಯಾಸತ್ವ ದೀಕ್ಷೆ ಪಡೆಯಲು ಮುಂದಾಗಿದ್ದಾರೆ.

ಲೌಕಿಕ ಜೀವನ ಬಿಟ್ಟು ಅಧ್ಯಾತ್ಮಿಕದತ್ತ ನಡೆದ 24 ವರ್ಷದ ಯುವತಿ
ಜಿಲ್ಲೆಯ ಸುರಪುರ ಪಟ್ಟಣದ ಖ್ಯಾತ ವ್ಯಾಪಾರಿ ಭರತಕುಮಾರ್ ಜೈನ್ ಹಾಗೂ ಗುಣವಂತಿ ಅವರ ಸುಪುತ್ರಿ ಮೋನಿಕಾ ಸಂಸಾರ ಜೀವನಕ್ಕೆ ವಿದಾಯ ಹೇಳುವ ಮೂಲಕ ಆಧ್ಯಾತ್ಮಿಕದತ್ತ ಪಯಣ ಮುಂದುವರೆಸಿದ್ದಾರೆ. ಸದ್ಯ ಜೈನ ಮುನಿಗಳ ಸಾನ್ನಿಧ್ಯದಲ್ಲಿ ದೀಕ್ಷಾರ್ಥಿ ಮೋನಿಕಾ ಸನ್ಮಾಸತ್ವದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಧಾರ್ಮಿಕ ಕಾರ್ಯಕ್ರಮ ಪೂರ್ಣ ಗೊಳಿಸುತ್ತಿದ್ದಾರೆ.
ಲೌಕಿಕ ಜೀವನ ಬಿಟ್ಟು ಅಧ್ಯಾತ್ಮಿಕದತ್ತ ನಡೆದ 24 ವರ್ಷದ ಯುವತಿ
ಕಬಾಡಗೇರಾ ದಿಂದ ಶೆಟ್ಟಿಮೋಹಲ್ಲಾದ ಓಣಿಯ ಜೈನಮಂದಿರದ ವರಗೆ ತೆರೆದ ಕುದುರೆ ಸಾರೋಟದ ವಾಹನದಲ್ಲಿ ಅದ್ದೂರಿಯಾಗಿ ದೀಕ್ಷಾರ್ಥಿಯ ಮೆರವಣಿಗೆ ನಡೆಸಲಾಯಿತು. ಈ ವೇಳೆ ಮೋನಿಕಾ ವಿವಿಧ ವಸ್ತುಗಳನ್ನು ದಾನ ಮಾಡಿದರು.