ಕರ್ನಾಟಕ

karnataka

ETV Bharat / state

ಕೃಷ್ಣೆ, ಭೀಮೆಯ ಆರ್ಭಟಕ್ಕೆ ಜನ ತತ್ತರ: ಗ್ರಾಮ ತೊರೆಯುವಂತೆ ಯಾದಗಿರಿ ಜಿಲ್ಲಾಡಳಿತ ಸೂಚನೆ - Bhima river

ಇತ್ತ ಕೃಷ್ಣೆ ಆರ್ಭಟಿಸಿದರೆ, ಅತ್ತ ಭೀಮೆಯ ರುದ್ರ ನರ್ತನಕ್ಕೆ ಸಿದ್ಧವಾಗಿದ್ದಾಳೆ. ಸದ್ಯ ಉಜನಿ ಜಲಾಶಯ ಭರ್ತಿಯಾಗಿರುವುದರಿಂದ ಭೀಮಾ ನದಿಗೆ ನೀರು ಬಿಡಲಾಗುತ್ತಿದೆ. ಮುಂಜಾಗೃತ ಕ್ರಮವಾಗಿ ನದಿ ತೀರದ ಜನರಿಗೆ ಸ್ಥಳಾಂತರವಾಗುವಂತೆ ಸೂಚನೆ ನೀಡಲಾಗಿದೆ.

ಭೀಮಾ ನದಿ

By

Published : Aug 8, 2019, 10:06 PM IST

ಯಾದಗಿರ:ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಭೀಮಾನದಿ ಒಡಲು ಉಕ್ಕಿ ಹರಿಯುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.‌ ಜಿಲ್ಲೆಯಾದ್ಯಂತ ಒಂದು ಕಡೆ ಕೃಷ್ಣೆ ಉಕ್ಕಿ ಹರಿಯುತ್ತಿದ್ದರೆ ಇನ್ನೊಂದೆಡೆ ಭೀಮಾ ಆರ್ಭಟಿಸುತ್ತಿದ್ದಾಳೆ.

ಉಜನಿ ಜಲಾಶಯದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಭೀಮಾ ನದಿಗೆ ರಾತ್ರಿ ನೀರು ಹರಿದು ಬರುತ್ತಿದ್ದು, ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ನದಿ ಪಾತ್ರದ ಗ್ರಾಮಗಳಿಗೆ ಎಚ್ಚರಿಕೆ ರವಾನಿಸಿದ್ದಾರೆ.

ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಬಿಡುಗಡೆ

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಮನ್ನಿಕೇರಿ ಅವರು, ಭೀಮಾ ಹಾಗೂ ಕೃಷ್ಣ ನದಿ ಪಾತ್ರದ ಗೌಡಗೇರಾ, ಹುರುಸಗುಂಡಗಿ, ಕೌಳೂರ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳಾಂತರವಾಗುವಂತೆ ಸೂಚಿಸಿದರು.

ABOUT THE AUTHOR

...view details