ಯಾದಗಿರಿ:ಸೀಲ್ ಡೌನ್ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ಸಂಭ್ರಮಾಚರಣೆ ನಡೆಸುವ ಮೂಲಕ ಕೊರೊನಾ ವೈರಸ್ನಿಂದ ಗುಣಮುಖರಾದ ತಂದೆ-ಮಗಳಿಗೆ ಸ್ವಾಗತ ಕೋರಲಾಗಿದೆ.
ನಗರದ ದುಕನವಾಡಿಯಲ್ಲಿ ಈ ಘಟನೆ ಜರಗಿದ್ದು, ಸಂಭ್ರಮದಲ್ಲಿ ಸ್ಥಳೀಯರು ಸರ್ಕಾರದ ನಿಯಮಗಳನ್ನ ಉಲ್ಲಂಘಿಸಿದ್ದಾರೆ. ದುಕನವಾಡಿಯ ನಿವಾಸಿಗಳಾದ ತಂದೆ ಮಗಳಿಗೆ ಕೊರೊನಾ ಪಾಸಿಟಿವ್ ಬಂದ ಮೇಲೆ ಇವರನ್ನ ಚಿಕಿತ್ಸೆಗಾಗಿ ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಕೋವಿಡ್ 19 ವಾರ್ಡ್ಗೆ ದಾಖಲಿಸಲಾಗಿತ್ತು.
ಗುಣಮುಖರಾದ ಸೋಂಕಿತರಿಗೆ ಅಂತರ ಮರೆತು ಅದ್ಧೂರಿ ಸ್ವಾಗತ ಕೋರಿದ ಜನ ಸದ್ಯ ತಂದೆ-ಮಗಳು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಇವರಿಬ್ಬರನ್ನೂ ಬಿಡುಗಡೆ ಮಾಡಲಾಗಿದೆ. ದುಕನವಾಡಿ ನಿವಾಸಿಗಳು ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸುವ ಮೂಲಕ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಸಾಮಾಜಿಕ ಅಂತರ ಮರೆತು ಸಂಭ್ರಮದಲ್ಲಿ ಮುಳುಗಿದ್ದರು.
ಈಗಾಗಲೇ ದುಕನವಾಡಿ ಪ್ರದೇಶ ಜಿಲ್ಲಾಡಳಿತ ಕಂಟೇನ್ಮೆಂಟ್ ಪ್ರದೇಶವೆಂದು ಘೋಷಿಸಿದೆ. ಇದರ ನಡುವೆ ಸಾಮಾಜಿಕ ಅಂತರ ಮರೆತು ಸ್ಥಳೀಯರು ಆತಂಕ ಸೃಷ್ಟಿಸಿದ್ದಾರೆ.