ಯಾದಗಿರಿ:ತನ್ನ ತಾಯಿ ಮೃತರಾದ ಹಿನ್ನೆಲೆಯಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಲು ಅರ್ಜಿ ಸಲ್ಲಿಸಿದ ಯುವಕನಿಗೆ ಕೇವಲ 24 ಗಂಟೆಯೊಳಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಉದ್ಯೋಗ ನೀಡಿ ಮಾನವೀಯತೆ ಮೆರೆದಿದ್ದಾರೆ.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಸೇವೆಯಲ್ಲಿರುವಾಗ ಮೃತರಾದ ಯಾದಗಿರಿ ನಗರದ ದಿ. ಶುಭಲಕ್ಷ್ಮೀ ಮಲ್ಲಿಕಾರ್ಜುನ ಎಂಬುವರ ಮಗ ಗಿರೀಶಕುಮಾರ್ ನೌಕರಿ ಪಡೆದ ಯುವಕನಾಗಿದ್ದಾನೆ. ದಿ. ಶುಭಲಕ್ಷ್ಮೀ ಯಾದಗಿರಿ ಗ್ರೂಪ್ ಡಿ. ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ 2021ರ ಆಗಸ್ಟ್ 21ರಂದು ಮೃತಪಟ್ಟಿದ್ದರು. ಇವರ ಮಗನಾದ ಗಿರೀಶಕುಮಾರ್ ಅನುಕಂಪದ ಆಧಾರದ ಮೇಲೆ ಗ್ರೂಪ್ ಡಿ. ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದರು.