ಕರ್ನಾಟಕ

karnataka

ETV Bharat / state

ಲಾಕ್‌ಡೌನ್ ನಿಯಮ ಗಾಳಿಗೆ ತೂರಿದ ಸುರಪುರ ನಗರಸಭೆ ಅಧಿಕಾರಿಗಳು, ಜನರು - ಲಾಕ್​ಡೌನ್​ ನಿಯಮ ಉಲ್ಲಂಘನೆ

ಯಾದಗಿರಿ ಜಿಲ್ಲೆಯ ಸುರಪುರ ನಗರದ ರಂಗಂಪೇಟೆಯಲ್ಲಿ ನಡೆದ ಸಂತೆಯಲ್ಲಿ ಜಿಲ್ಲಾಧಿಕಾರಿಗಳ ಲಾಕ್‌ಡೌನ್ ನಿಯಮ ಉಲ್ಲಂಘನೆಯ ಜೊತೆಗೆ ಮಾಸ್ಕ್ ಧರಿಸದೆ ನೂರಾನು ಜನರು ನಿರ್ಭಯವಾಗಿ ವ್ಯಾಪಾರ ವಹಿವಾಟು ನಡೆಸಿದ್ದಾರೆ.

yadagiri-dc-rules-broken-by-surapura-municipality-officers
ಸುರಪುರ ನಗರಸಭೆ

By

Published : May 1, 2020, 12:56 PM IST

ಸುರಪುರ: ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರವನ್ನು ನಗರಸಭೆಗೆ ನೀಡಲಾಗಿದೆ. ಆದರೆ ಅಧಿಕಾರಿಗಳು ಮಾತ್ರ ಸಂತೆಗೂ ತಮಗೂ ಸಂಬಂಧವಿಲ್ಲವೆಂಬಂತೆ ವರ್ತಿ‌ಸುತ್ತಿದ್ದಾರೆ.

ನಗರದ ರಂಗಂಪೇಟೆಯಲ್ಲಿ ಕಳೆದ ಮೂರು ವಾರಗಳಿಂದ ಪ್ರತಿವಾರವೂ ಸಂತೆ ನಡೆಯುತ್ತಿದೆ. ಸದ್ಯ ಕೊರೊನಾ ಭೀತಿಯಲ್ಲಿ ಸಾಮಾಜಿಕ ಅಂತರದೊಂದಿಗೆ ಸಂತೆ ನಡೆಸುವಂತೆ ಜಿಲ್ಲಾಧಿಕಾರಿಗಳು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಸಂತೆಯಲ್ಲಿ ಅಂತರ ಕಾಪಾಡದೆ, ಮಾಸ್ಕ್​​ ಧರಿಸದೆ ನೂರಾರು ಜನ ಕೋವಿಡ್​ ಭೀತಿ ಮರೆತು ನಿರ್ಭಯವಾಗಿದ್ದಾರೆ. ಅಲ್ಲದೆ ಎಚ್ಚರ ವಹಿಸಬೇಕಿದ್ದ ಅಧಿಕಾರಿಗಳು ಕೂಡ ಅತ್ತ ಸುಳಿಯುತ್ತಿಲ್ಲ.

ಡಿಸಿ ನಿಯಮ ಗಾಳಿಗೆ ತೂರಿದ ಸುರುಪುರ ನಗರಸಭೆ ಅಧಿಕಾರಿಗಳು ಮತ್ತು ಜನರು

ಯಾದಗಿರಿ ಜಿಲ್ಲಾಧಿಕಾರಿಗಳು ಮಾಸ್ಕ್ ಧರಿಸದೆ ಹೊರಗೆ ಕಂಡವರಿಗೆ, ಎಲ್ಲೆಂದರಲ್ಲಿ ಉಗಿಯುವವರಿಗೆ, ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಪಾಲನೆ ಮಾಡಿದ್ದಿದ್ದರೆ ದಂಡ ವಿಧಿಸುವಂತೆ ಆದೇಶ ಹೊರಡಿಸಿದ್ದರು. ಆದರೆ ನಗರಸಭೆ ಅಧಿಕಾರಿಗಳು ಮತ್ತು ಜನರು ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿದ್ದಾರೆ.

ನಗರಸಭೆ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಸರ್ಕಾರಗಳು ಮಾಡುವ ನಿಯಮಗಳು ಜನರ ಒಳಿತಿಗಾಗಿಯೇ. ಕೋವಿಡ್-19ಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಪಾಲಿಸದವರಿಗೆ ತಕ್ಕ ಪಾಠ ಕಲಿಸಿ ಎಂದು ಶ್ರೀಮಂತ ಚಲುವಾದಿ ನಗರಸಭೆಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ABOUT THE AUTHOR

...view details