ಯಾದಗಿರಿ: ಜಿಲ್ಲೆಯಲ್ಲಿ ಕಿಲ್ಲರ್ ಕೊರೊನಾ ಅಟ್ಟಹಾಸ ದಿನ ಕಳೆದಂತೆ ಹೆಚ್ಚಾಗುತ್ತಿದ್ದು, ಈಗ ಈ ಹೆಮ್ಮಾರಿ ವೈರಸ್ ಜಿಲ್ಲಾಡಳಿತ ಭವನಕ್ಕೂ ಕಾಲಿಡುವ ಮೂಲಕ ಡಿಸಿ ಎಂ ಕುರ್ಮಾರಾವ್ ಅವರಿಗೂ ಕೊರೊನಾ ಭೀತಿ ಎದುರಾಗಿದೆ
ಜಿಲ್ಲಾಡಳಿತ ಭವನಕ್ಕೂ ಕಾಲಿಟ್ಟ ಕೊರೊನಾ: ಆತಂಕದಲ್ಲಿ ಯಾದಗಿರಿ ಡಿಸಿ
ಯಾದಗಿರಿ ಡಿಸಿ ಅವರ ಗನ್ ಮ್ಯಾನ್ ಹಾಗೂ ಜಿಲ್ಲಾಧಿಕಾರಿ ಹೊರಗುತ್ತಿಗೆ ಕಾರು ಚಾಲಕನಿಗೆ ಸೋಂಕು ತಗಲುವ ಸಾಧ್ಯತೆಗಳಿದ್ದು, ಈಗ ಜಿಲ್ಲಾಧಿಕಾರಿ ಎಂ ಕುರ್ಮಾರಾವ್ ಅವರಿಗೆ ಕೊರೊನಾ ಭೀತಿ ಎದುರಾಗಿದೆ.
ಯಾದಗಿರಿ ಡಿಸಿ ಅವರ ಗನ್ ಮ್ಯಾನ್ ಹಾಗೂ ಜಿಲ್ಲಾಧಿಕಾರಿ ಹೊರಗುತ್ತಿಗೆ ಕಾರು ಚಾಲಕನಿಗೆ ಸೋಂಕು ತಗಲುವ ಸಾಧ್ಯತೆಗಳಿದ್ದು, ಈಗ ಜಿಲ್ಲಾಧಿಕಾರಿ ಎಂ ಕುರ್ಮಾರಾವ್ ಅವರಿಗೆ ಕೊರೊನಾ ಭೀತಿ ಎದುರಾಗಿದೆ. ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಜಿಲ್ಲಾ ಪಂಚಾಯತ್ ಕಚೇರಿಯ 20 ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಸೋಂಕು ತಗಲುವ ಸಾಧ್ಯತೆಗಳಿದ್ದು, ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ಅಧಿಕೃತ ವರದಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಜಿಲ್ಲಾಧಿಕಾರಿ ಕಚೇರಿಗೆ ಕೊರೊನಾ ಲಗ್ಗೆ ಇಟ್ಟ ಹಿನ್ನೆಲೆ ಇಂದು ಜಿಲ್ಲಾಡಳಿತ ಭವನಕ್ಕೆ ಸ್ಯಾನಿಟೈಸಿಂಗ್ ಮಾಡಲಾಗುತ್ತಿದೆ. ಹೀಗಾಗಿ ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಕಚೇರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಜಿಲ್ಲೆಯಲ್ಲೀಗ ಒಟ್ಟು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುವ ಮೂಲಕ ಜನರಲ್ಲಿ ಭೀತಿ ಮುಂದುವರೆದಿದೆ. ಜಿಲ್ಲಾಡಳಿತ ಭವನಕ್ಕೂ ಸೋಂಕು ವಕ್ಕರಿಸುವ ಸಾಧ್ಯತೆಗಳಿದ್ದು ಜಿಲ್ಲೆಯ ಸಾರ್ವಜನಿಕರಲ್ಲಿ ಆತಂಕವನ್ನುಂಟುಮಾಡಿದೆ.