ಯಾದಗಿರಿ:ಜಿಲ್ಲೆಯಲ್ಲಿ ನೂರಕ್ಕೆ ಐವತ್ತು ಪ್ರತಿ ಶತದಷ್ಟು ರೈತರು ನೀರಾವರಿ ಪ್ರದೇಶವಿಲ್ಲದಿದ್ರು ಬಂಪರ್ ಫಸಲು ಬರುತ್ತೆ ಎನ್ನುವ ಕಾರಣಕ್ಕೆ ಹತ್ತಿ ಬೆಳೆಯನ್ನ ಬೆಳೆಯುತ್ತಿದ್ದಾರೆ. ಆದ್ರೆ ಈ ಭಾರಿ ಪ್ರವಾಹ ಮತ್ತು ಮಳೆಯ ಹೊಡೆತಕ್ಕೆ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಳೆಯಿಂದಾಗಿ ಸಾವಿರಾರು ರೂ.ಖರ್ಚು ಮಾಡಿ ಬೆಳೆದ ಹತ್ತಿ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಆದ್ರೆ ಉಳಿದ ಅಲ್ಪಸ್ವಲ್ಪ ಬೆಳೆಯನ್ನಾದ್ರು ರಾಶಿ ಮಾಡಿಕೊಂಡು ಮಾರಾಟ ಮಾಡಬೇಕೆಂದು ಅಂದುಕೊಂಡ ರೈತರಿಗೆ ಜಿಲ್ಲೆಯಲ್ಲಿ ಸರ್ಕಾರದ ಖರೀದಿ ಕೇಂದ್ರ ಇಲ್ಲದ ಕಾರಣ ದಲ್ಲಾಳಿಗಳ ಕೈಗೆ ಸಿಕ್ಕು ಫಜೀತಿ ಅನುಭವಿಸುತ್ತಿದ್ದಾರೆ.
ಯಾದಗಿರಿ ಜಿಲ್ಲಾ ಕೇಂದ್ರವಾಗಿ 11 ವರ್ಷಗಳು ಆಗುತ್ತಾ ಬಂದರೂ ಜಿಲ್ಲೆಯ ಎಪಿಎಂಸಿ ಯಾರ್ಡ್ ನಲ್ಲಿ ಸರ್ಕಾರ ಖರೀದಿ ಕೇಂದ್ರ ಆರಂಭಿಸಿಲ್ಲ. ಹೀಗಾಗಿ ರೈತರು ಕಂಗಲಾಗುವಂತೆ ಮಾಡಿದೆ. ಹಾಗೆನಾದ್ರು ಸರ್ಕಾರಿ ಖರೀದಿ ಕೇಂದ್ರದಲ್ಲಿ ಹತ್ತಿಯನ್ನ ಮಾರಾಟ ಮಾಡ್ಬೇಕು ಅಂದ್ರೆ ದೂರದ ರಾಯಚೂರಿಗೆ ಹೋಗಬೇಕು. ಆದ್ರೆ ಅಷ್ಟೊಂದು ಖರ್ಚು ಮಾಡಿ ರಾಯಚೂರಿಗೆ ಹೋಗಲಾಗದೆ ರೈತರು ಪರದಾಡುವಂತಾಗಿದೆ. ಹೀಗಾಗಿ ನಮ್ಮ ಜಿಲ್ಲೆಯಲ್ಲೇ ಹತ್ತಿ ಖರೀದಿ ಕೇಂದ್ರ ಮಾಡುವಂತೆ ರೈತರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಸರ್ಕಾರದಿಂದ ಹತ್ತಿ ಖರೀದಿ ಕೇಂದ್ರ ಆರಂಭಿಸದ ಹಿನ್ನಲೆ ರೈತರು ದಲ್ಲಾಳಿಗಳ ಕೈಗೆ ತಗ್ಲಾಕಿಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿ ದಲ್ಲಾಳಿಗಳ ಸಂಖ್ಯೆ ಏನು ಕಮ್ಮಿ ಇಲ್ಲ ಜಿಲ್ಲಾ ಕೇಂದ್ರ ಪ್ರಮುಖ ರಸ್ತೆಗಳಲ್ಲಿ ಟೆಂಟ್ ಹಾಕಿಕೊಂಡು ಯಾವುದೇ ಪರವಾನಿಗೆ ಇಲ್ಲದೆ ಅಂಗಡಿಗಳನ್ನ ಓಪನ್ ಮಾಡಿಕೊಂಡು ಕುಳಿತುಕೊಂಡಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಸರ್ಕಾರದ ಖರೀದಿ ಇಲ್ಲದ ಕಾರಣ ದಲ್ಲಾಳಿಗಳು ಮನಸ್ಸಿಗೆ ಬಂದ ಹಾಗೆ ರೇಟ್ ನೀಡಿ ರೈತರಿಂದ ಹತ್ತಿಯನ್ನ ಖರೀದಿ ಮಾಡುತ್ತಿದ್ದಾರೆ. ಅನಿವಾರ್ಯವಾಗಿ ರೈತರು ಸಹ ದಲ್ಲಾಳಿಗಳಿಗೆ ರೇಟ್ ಸಿಗದಿದ್ದರು ಸಹ ಹತ್ತಿಯನ್ನ ಮಾರಾಟ ಮಾಡಿ ಹೋಗುವಂತಾಗಿದೆ.
ಈ ವರ್ಷ ಭೀಮಾ ನದಿ ಪ್ರವಾಹದಿಂದ ತತ್ತರಿಸಿದ ರೈತರಿಗೆ ದಲ್ಲಾಳಿಗಳಿಂದ ಡಬಲ್ ಹೊಡೆತಾ ಬಿಳ್ತಾಯಿದೆ. ಇರುವಂತ ಅಲ್ವಸ್ವಲ್ಪ ಬೆಳೆಯನ್ನಾದ್ರು ಸರಿಯಾದ ಬೆಲೆಗೆ ಮಾರಾಟ ಮಾಡಬೇಕಾದ್ರೆ ದಲ್ಲಾಳಿಗಳು ಬೇಕಾಬಿಟ್ಟಿ ರೇಟ್ ನಿಗದಿ ಮಾಡಿ ರೈತರ ಅನಿವಾರ್ಯತೆಯನ್ನ ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಕೇಳಿದ್ರೆ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಆದೇಶ ಮಾಡಿದ ಕೂಡಲೇ ಆರಂಭಿಸುತ್ತೇವೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ.