ಕರ್ನಾಟಕ

karnataka

ETV Bharat / state

‘ಕಾಲಿಗೆ ಬೀಳುತ್ತೇನೆ, ನನ್ನನ್ನು ಬಿಟ್ಟು ಬಿಡಿ’; ಯಾದಗಿರಿಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ! - ಯಾದಗಿರಿಯಲ್ಲಿ ಮಹಿಳೆಯ ಅತ್ಯಾಚಾರ

ಆಟೋದಲ್ಲಿದ್ದ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಾಡಹಗಲೇ ಸಾಮೂಹಿಕ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

Woman raped by auto driver and his friend in Yadagiri, Woman raped in Yadagiri, Yadagari crime news, ಯಾದಗಿರಿಯಲ್ಲಿ ಆಟೋ ಚಾಲಕ ಮತ್ತು ಆತನ ಸ್ನೇಹಿತನಿಂದ ಮಹಿಳೆ ಮೇಲೆ ಅತ್ಯಾಚಾರ, ಯಾದಗಿರಿಯಲ್ಲಿ ಮಹಿಳೆಯ ಅತ್ಯಾಚಾರ, ಯಾದಗಿರಿ ಅಪರಾಧ ಸುದ್ದಿ,
ಹಾಡಹಗಲೇ ಯುವತಿ ಮೇಲೆ ಅತ್ಯಾಚಾರ

By

Published : Apr 28, 2022, 1:23 PM IST

ಯಾದಗಿರಿ:ಆಟೋದಲ್ಲಿದ್ದ ಯುವತಿಯನ್ನು ಚಾಲಕ ಮತ್ತು ಆತನ ಸ್ನೇಹಿತ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿರುವ ಘಟನೆ ಏಪ್ರಿಲ್​ 26ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ಇಡೀ ಯಾದಗಿರಿ ಜನರೇ ಬೆಚ್ಚಿ ಬಿದ್ದಿದ್ದಾರೆ.

ಯಾದಗಿರಿ ಜಲ್ಲಾ ಪೊಲೀಸ್ ಅಧಿಕ್ಷಕರಾದ ಡಾ. ವೇದಮೂರ್ತಿ ಹೇಳಿಕೆ

ಏನಿದು ಪ್ರಕರಣ: 26ರ ಮಂಗಳವಾರದಂದು ಮನೆ ಕೆಲಸಕ್ಕೆಂದು ಯುವತಿಯೊಬ್ಬಳು ತನ್ನ ಹಳ್ಳಿಯಿಂದ ಯಾದಗಿರಿಗೆ ಆಟೋದಲ್ಲಿ ಹೋಗುತ್ತಿದ್ದರು. ಈ ವೇಳೆ, ಆಟೋ ಚಾಲಕ ಮತ್ತು ಆತನ ಸ್ನೇಹಿತ ಆಕೆಯನ್ನು ನಿರ್ಜನ ಪ್ರದೇಶದಲ್ಲಿರುವ ಪಾಳು ಬಿದ್ದ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಯುವತಿ ಮೇಲೆ ಅತ್ಯಾಚಾರ ನಡೆಸಲು ಆಟೋ ಚಾಲಕ ಮತ್ತು ಆತನ ಸ್ನೇಹಿತ ಇಬ್ಬರೂ ಯತ್ನಿಸುತ್ತಿದ್ದ ವೇಳೆ ಆಕೆ ‘ಕಾಲಿಗೆ ಬೀಳುತ್ತೇನೆ, ನನ್ನನ್ನು ಬಿಟ್ಟು ಬಿಡಿ’ ಅಂತಾ ಬೇಡಿಕೊಂಡಿದ್ದಾಳೆ. ಆದರೂ ಸಹಿತ ಆ ಯುವತಿಯ ಮಾತಿಗೆ ಬೆಲೆ ಕೊಡದ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಯುವತಿ ಮೇಲೆ ಅತ್ಯಾಚಾರ ಮಾಡಿದ ಆರೋಪಿ

ಓದಿ:ಅವಕಾಶ ನೀಡುವುದಾಗಿ ನಂಬಿಸಿ ನಟಿ ಮೇಲೆ ಅತ್ಯಾಚಾರ ಆರೋಪ : ಖ್ಯಾತ ನಟನ ವಿರುದ್ಧ ಪ್ರಕರಣ

ಅಷ್ಟೇ ಅಲ್ಲದೇ ಅತ್ಯಾಚಾರದ ವಿಡಿಯೋ ರೆಕಾರ್ಡ್ ಮಾಡಿ ಈ ವಿಷಯ ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿ ಕಳುಹಿಸಿದ್ದಾರೆ. ಈ ಕಹಿ ಘಟನೆ ಬಗ್ಗೆ ಯುವತಿ ಪೋಷಕರಿಗೆ ಹೇಳಿದ್ದಾಳೆ. ಕೂಡಲೇ ಯುವತಿಯ ಚಿಕ್ಕಪ್ಪ ಯಾದಗಿರಿ ಮಹಿಳೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಾದ ಆಟೋ ಚಾಲಕ ಹನುಮಂತ್ ಹಾಗೂ ಆತನ ಸ್ನೇಹಿತ ನರಸಪ್ಪನನ್ನು ಬಂಧಿಸಿದ್ದಾರೆ. ಈ ವೇಳೆ, ಪೊಲೀಸರು ಆಟೋ ಜಪ್ತಿ ಮಾಡಿದ್ದಾರೆ.

ಯುವತಿ ಮೇಲೆ ಅತ್ಯಾಚಾರ ಮಾಡಿದ ಆರೋಪಿ

ಯಾದಗಿರಿಯಲ್ಲಿ ದುರ್ಘಟನೆಯೊಂದು ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಸಾರ್ವಜನಿಕರು ಅದರಲ್ಲೂ ಹೆಣ್ಣು ಮಕ್ಕಳು ಒಂಟಿಯಾಗಿ ಹೋಗುವಾಗ ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು. ಖಾರದ ಪುಡಿಯನ್ನು ಪ್ಯಾಕೆಟ್​ನಲ್ಲಿ ಇಟ್ಟುಕೊಂಡು ಆತ್ಮ ರಕ್ಷಣೆಗೆ ಬಳಸಿಕೊಳ್ಳಬೇಕು. ಮಹಿಳೆಯರಿಗೆ ಯಾವುದೇ ತೊಂದರೆಗಳಿದ್ದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬೇಕು. ಅಥವಾ 112 ಉಚಿತ ದೂರವಾಣಿಗೆ ಕರೆ ಮಾಡಬೇಕು ಎಂದು ಜಲ್ಲಾ ಪೊಲೀಸ್ ಅಧಿಕ್ಷಕರಾದ ಡಾ. ವೇದಮೂರ್ತಿ ಹೇಳಿದ್ದಾರೆ.

ABOUT THE AUTHOR

...view details