ಯಾದಗಿರಿ: ಸರ್ಕಾರಿ ಆಸ್ಪತ್ರೆಯೊಂದರಲ್ಲಿ ವೈದ್ಯೆಯರು ಬಾಣಂತಿ ಡಿಸ್ಚಾರ್ಜ್‍ಗೆ ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣ ಮಾಸುವ ಮುನ್ನವೇ, ಸಕಾಲಕ್ಕೆ ಸಿಬ್ಬಂದಿ ಬಾರದೇ ಆಸ್ಪತ್ರೆ ಒಳಾಂಗಣದ ದಾರಿಯಲ್ಲಿ ಹೆರಿಗೆಯಾದ ಘಟನೆ ಶನಿವಾರ ತಡರಾತ್ರಿ ಯಾದಗಿರಿ ನಗರದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ.
ಶನಿವಾರ ತಡರಾತ್ರಿ 12 ಗಂಟೆಗೆ ಆಸ್ಪತ್ರೆಗೆ ಮಹಿಳೆಯನ್ನು ಆಕೆಯ ಪತಿ ನವಾಜ್ ಕರೆದುಕೊಂಡು ಬಂದಿದ್ದಾರೆ. ಅಲ್ಲಿದ್ದ ಇಬ್ಬರು ಸಿಬ್ಬಂದಿ ಗಮನಕ್ಕೆ ತಂದಾಗ ಅವರು ಸಕಾಲಕ್ಕೆ ಬಾರದೇ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಂತರ ಗರ್ಭಿಣಿಯ ನರಳಾಟ ಹೆಚ್ಚಾದ ಕಾರಣ ಆಸ್ಪತ್ರೆಗೆ ಬಂದಿದ್ದ ಮಹಿಳೆಯೊಬ್ಬರ ಸಹಾಯ ಪಡೆದು, ನವಾಜ್ ತಮ್ಮ ಟವೆಲ್ನನ್ನು ಮರೆ ಮಾಡಿ ಪತ್ನಿ ಹೆರಿಗೆ ಮಾಡಿಸಿದ್ದಾರೆ ಎನ್ನಲಾಗ್ತಿದೆ.