ಕರ್ನಾಟಕ

karnataka

ETV Bharat / state

ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಅವಳಿ ಸಹೋದರರಿಂದ ಸೈಕಲ್ ಯಾತ್ರೆ : ಸ್ವಗ್ರಾಮದಲ್ಲಿ ಅದ್ದೂರಿ ಸ್ವಾಗತ - win brothers cycle rally from bidar to chamarajanagar

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸೈಕಲ್ ಯಾತ್ರೆ ಮಾಡುವ ಮೂಲಕ ಅವಳಿ ಸಹೋದರರಾದ ಅರುಣ್‌ ಮತ್ತು ಕರಣ್ ಅವರು ನಮನ ಸಲ್ಲಿಸಿದ್ದಾರೆ..

win brothers cycle rally
ಅವಳಿ ಸಹೋದರರಿಂದ ಸೈಕಲ್ ಯಾತ್ರೆ ಸ್ವಗ್ರಾಮದಲ್ಲಿ ಅದ್ಧೂರಿ ಸ್ವಾಗತ

By

Published : Apr 10, 2022, 1:48 PM IST

ಯಾದಗಿರಿ :ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕೊಳ್ಳೂರು ಗ್ರಾಮದ ಅಮರೇಶ್ವರ ದೇವಸ್ಥಾನದಿಂದ ಚಾಮರಾಜನಗರದ ಮಲೆಮಾದೇಶ್ವರ ಬೆಟ್ಟದವರೆಗೆ ಅರುಣ ಮತ್ತು ಕರಣ್ ಎಂಬ ಅವಳಿ ಸಹೋದರರು ಏ.3ರಂದು ಸೈಕಲ್ ಯಾತ್ರೆ ಕೈಗೊಂಡಿದ್ದರು. ಸೈಕಲ್ ಯಾತ್ರೆ ಮುಗಿಸಿ ಇಂದು ನಗರಕ್ಕೆ ಪ್ರವೇಶಿಸುವ ಮುನ್ನ ಸಿಬಿ ಕಮಾನ್ ಹತ್ತಿರ ಅವರನ್ನು ಗ್ರಾಮಸ್ಥರು ಸ್ವಾಗತಿಸಿ, ಚರಬಸವೇಶ್ವರ ಗದ್ದುಗೆಗೆ ಮೆರವಣಿಗೆ ಮೂಲಕ ಕರೆದೊಯ್ದರು.

ಅವಳಿ ಸಹೋದರರಿಂದ ಸೈಕಲ್ ಯಾತ್ರೆ, ಸ್ವಗ್ರಾಮದಲ್ಲಿ ಅದ್ಧೂರಿ ಸ್ವಾಗತ..

ರಾಷ್ಟ್ರೀಯ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಬಿರಾದಾರ್ ಮಾತನಾಡಿ, ಸ್ವಾತಂತ್ರ್ಯ ಅಮೃತ ಮಹೋತ್ಸವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಾಹಸಕ್ಕಿಳಿದ 9ನೇ ತರಗತಿಯಲ್ಲಿ ಓದುತ್ತಿರುವ ಅರುಣ್‌ ಮತ್ತು ಕರಣ್ ಅವಳಿ ಸಹೋದರರ ಕಾರ್ಯ ಶ್ಲಾಘನೀಯ.

ತಮ್ಮ ಚಿಕ್ಕವಯಸ್ಸಿನಲ್ಲಿಯೇ ದೇಶ ಮತ್ತು ಯೋಧರ ಬಗ್ಗೆ ಇವರಲ್ಲಿರುವ ಗೌರವ ಅಗಾಧವಾದದ್ದು. ಈ ದೇಶದ ಬಗ್ಗೆ ಸದಾ ಜಾಗೃತರಾಗಿರುವಂತೆ ಅರಿವು ಮೂಡಿಸಲು ಈ ಬಾಲಕರು ಕೈಗೊಂಡಿರುವ ಕಾರ್ಯ ಅಸಾಮಾನ್ಯ. ಈ ಬಾಲಕರು ಕೈಗೊಂಡಿರುವ ಸೈಕಲ್ ಯಾತ್ರೆ ಯುವಕರಿಗೆ ಪ್ರೇರಣೆಯಾಗಿದೆ ಎಂದರು.

ಹಿಂದೂಪರ ಸಂಘಟನೆ ಮುಖಂಡ ಸುಧೀರ್ ಚಿಂಚೋಳಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲು ಈ ಪುಟ್ಟ ಬಾಲಕರು ಕೈಗೊಂಡಿರುವ ಸೈಕಲ್ ಯಾತ್ರೆ ಅತ್ಯಂತ ಸ್ಪೂರ್ತಿದಾಯಕ. ನಮ್ಮ ಯೋಧರು ಮಾಡಿದ ತ್ಯಾಗ,ಬಲಿದಾನವನ್ನು ಗೌರವಿಸುವ ನಿಟ್ಟಿನಲ್ಲಿ ಈ ದೇಶದ ಪ್ರತಿಯೊಬ್ಬ ನಾಗರಿಕರು ಸ್ವಯಂ ಜಾಗೃತರಾಗಿ ದೇಶವನ್ನು ಮುನ್ನಡೆಸುವಂತಾಗಬೇಕು ಎಂದರು.

ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ, ಫಕೀರೇಶ್ವರ ಮಠದ ಪೀಠಾಧಿಪತಿ ಗುರುಪಾದ ಶಿವಾಚಾರ್ಯರು, ಶಿಕ್ಷಕರಾದ ರಾಮ್‌ ಭಟ್ಟ ಜೋಶಿ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುಧಾಕರ್ ಗುಡಿ, ತಾಲೂಕು ವೀರಶೈವ ಸಮಾಜದ ಯೂತ್ ಅಧ್ಯಕ್ಷ ಶಂಭುಲಿಂಗ ಗೋಗಿ ಸೇರಿದಂತೆ ಇತರರು ಭಾಗಿಯಾಗಿದ್ದರು.

ಇದನ್ನೂ ಓದಿ:ಅಪ್ಪುಗಾಗಿ ಹಿಮಾಲಯದಿಂದ ಬಂದ ಅಭಿಮಾನಿಗೆ ಅಶ್ವಿನಿ ಕೊಟ್ರು ಕಾಸ್ಟ್ಲೀ ಉಡುಗೊರೆ

ABOUT THE AUTHOR

...view details