ಕರ್ನಾಟಕ

karnataka

ETV Bharat / state

ವೀಕೆಂಡ್ ಕರ್ಫ್ಯೂ: ಯಾದಗಿರಿ ಸಂಪೂರ್ಣ ಸ್ತಬ್ಧ - ವೀಕೆಂಡ್ ಕರ್ಪ್ಯೂ

ವೀಕೆಂಡ್ ಕರ್ಪ್ಯೂ ಹಿನ್ನೆಲೆ ಜಿಲ್ಲಾಡಳಿತ ಸರ್ಕಾರದ ಮಾರ್ಗಸೂಚಿಯಂತೆ ಇಂದು ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಕಿರಾಣಿ ಅಂಗಡಿಗಳಿಗೆ ಅವಕಾಶ ಕಲ್ಪಿಸಿದ್ದು, ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನ ಬಂದ ಮಾಡಿಸಲಾಗಿದೆ.

ಯಾದಗಿರಿ ಸಂಪೂರ್ಣ ಸ್ತಬ್ದ
ಯಾದಗಿರಿ ಸಂಪೂರ್ಣ ಸ್ತಬ್ದ

By

Published : Apr 24, 2021, 10:29 AM IST

ಯಾದಗಿರಿ:ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳ ಜೊತೆ ಇಂದು ಮತ್ತು ನಾಳೆ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದು, ಯಾದಗಿರಿ ನಗರ ಸಂಪೂರ್ಣ ಸ್ತಬ್ಧವಾಗಿದೆ.

ಯಾದಗಿರಿ ಸಂಪೂರ್ಣ ಸ್ತಬ್ಧ

ಕಲಬುರಗಿ ಮತ್ತು ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಕೊರೊನಾ ಉಲ್ಬಣಗೊಂಡಿದ್ದು, ದಿನ ಕಳೆದಂತೆ ಜಿಲ್ಲೆಯಲ್ಲೂ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಜಿಲ್ಲಾಡಳಿತ ಕೂಡ ಕಳೆದ ಎರಡು ದಿನಗಳಿಂದ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಎಲ್ಲ ಅಂಗಡಿ ಮುಂಗಟ್ಟುಗಳನ್ನ ಬಂದ ಮಾಡಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

ಇತ್ತ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಜಿಲ್ಲಾಡಳಿತ ಸರ್ಕಾರದ ಮಾರ್ಗಸೂಚಿಯಂತೆ ಇಂದು ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಕಿರಾಣಿ ಅಂಗಡಿಗಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನ ಬಂದ್​ ಮಾಡಿಸಲಾಗಿದೆ. ಕರ್ಫ್ಯೂ ಹಿನ್ನೆಲೆ ಬೆರಳೆಣಿಕೆಯಷ್ಟು ಜನ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಹೊರಬಂದುದ್ದು, ಇಲ್ಲೂ ಕೂಡ ಸರ್ವಜನಿರು ಮಾಸ್ಕ್ ಧರಿಸದೆ ಅಗತ್ಯ ವಸ್ತುಗಳ ಖರೀದಿಗೆ ಮುಂದಾಗುವ ಮೂಲಕ ಕೋವಿಡ್ ನಿಯಮ ಗಾಳಿಗೆ ತೂರಿದ್ದಾರೆ.

ಓದಿ : ಸಿಬ್ಬಂದಿ ಕೊರತೆ, ಸಿಟಿ ಸ್ಕ್ಯಾನಿಂಗ್ ಸೆಂಟರ್ ಬಂದ್.. ಜಿಮ್ಸ್​ನಲ್ಲಿ​ ಕೋವಿಡ್ ರೋಗಿಗಳಿಗೆ ಸಂಬಂಧಿಕರೇ ಗತಿ!

ABOUT THE AUTHOR

...view details