ಯಾದಗಿರಿ: ನಾರಾಯಣಪುರದ ಬಸವಸಾಗರ ಜಲಾಶಯದಿಂದ ಮತ್ತೆ ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಬಿಡುಗಡೆ ಮಾಡಿದ್ದು, ನದಿ ತೀರದ ಗ್ರಾಮಗಳಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಡಂಗೂರ ಸಾರಲಾಗಿದೆ.
ಮತ್ತೆ ಕೃಷ್ಣಾ ನದಿಗೆ ನೀರು ಬಿಡುಗಡೆ: ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಡಂಗೂರ - ಕೃಷ್ಣಾ ನದಿ ಪ್ರವಾಹ ಸುದ್ದಿ
ನಾರಾಯಣಪುರದ ಬಸವಸಾಗರ ಜಲಾಶಯದಿಂದ ಮತ್ತೆ ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರನ್ನು ಬಿಡುಗಡೆ ಮಾಡಿದ್ದು, ನದಿ ತೀರದ ಗ್ರಾಮಗಳಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಡಂಗೂರದ ಮೂಲಕ ಸೂಚನೆ ನೀಡಲಾಗಿದೆ.
ಕೃಷ್ಣಾ ನದಿಗೆ ನೀರು ಬಿಡುಗಡೆ: ಛಾಯಾ ಭಗವತಿ ದೇಗುಲಕ್ಕೆ ನುಗ್ಗಿದ ನೀರು
ಜಲಾಶಯದಿಂದ 301052 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು , ಕೃಷ್ಣಾ ನದಿ ಪ್ರವಾಹಕ್ಕೆ ಛಾಯಾ ಭಗವತಿ ದೇಗುಲಕ್ಕೆ ನೀರು ನುಗ್ಗಿದೆ.
ಅಲ್ಲದೆ ನೀಲಕಂಠರಾಯನಗಡ್ಡಿ ಗ್ರಾಮ ಸಂಪೂರ್ಣವಾಗಿ ನಡುಗಡ್ಡೆಯಾಗಿದ್ದು, ಕೊಳ್ಳುರು ಸೇತುವೆ ಕೆಲವೇ ಗಂಟೆಯಲ್ಲಿ ಮುಳುಗಡೆಯಾಗುವ ಸಾಧ್ಯತೆಯಿದೆ.