ಕರ್ನಾಟಕ

karnataka

ETV Bharat / state

ಸೋನ್ನಾ ಬ್ಯಾರೇಜ್​ ನಿಂದ ಭೀಮಾನದಿಗೆ ನೀರು ಬಿಡುಗಡೆ: ಮತ್ತೆ ಆತಂಕದಲ್ಲಿ ನದಿ ಪಾತ್ರದ ಜನತೆ - Yadgir flood

ಸೋನ್ನಾ ಬ್ಯಾರೇಜ್​ 31 ಗೇಟ್​ಗಳ ಮೂಲಕ ಭೀಮಾ ನದಿಗೆ ನೀರನ್ನು ಹರಿಬಿಡಲಾಗುತ್ತಿದ್ದು, ನದಿ ಪಾತ್ರದ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.

Sonna Barrage
ಸೋನ್ನಾ ಬ್ಯಾರೇಜ್​

By

Published : Oct 19, 2020, 4:14 PM IST

ಯಾದಗಿರಿ:ಸೋನ್ನಾ ಬ್ಯಾರೇಜ್ ನಿಂದ ಭೀಮಾ ನದಿಗೆ ಹರಿಬಿಡಲಾಗುತ್ತಿರುವ ನೀರಿನ ಪ್ರಮಾಣ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದು, ನದಿ ಪಾತ್ರದ ಜನರಿಗೆ ಮತ್ತೆ ಆತಂಕ ಶುರುವಾಗಿದೆ.

ಸೋನ್ನಾ ಬ್ಯಾರೇಜ್​ ನಿಂದ ಭೀಮಾನದಿಗೆ ನೀರು ಬಿಡುಗಡೆ

ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಸೊನ್ನಾ ಬ್ಯಾರೇಜ್​ನಿಂದ 3 ಲಕ್ಷದ 71 ಸಾವಿರ ಕ್ಯೂಸೆಕ್ ನೀರು ಭೀಮಾ ನದಿಗೆ ಬಿಡಲಾಗಿದೆ. ಒಟ್ಟು 2.28 ಟಿಎಂಸಿ ಸಾಮರ್ಥ್ಯ ಹೊಂದಿದ ಬ್ಯಾರೇಜ್​ನಲ್ಲೀಗ 1.84 ಟಿಎಂಸಿ ನೀರು ಸಂಗ್ರಹವಾಗಿದೆ.

ಬ್ಯಾರೇಜ್​ನ 31 ಗೇಟ್​ಗಳನ್ನು ತೆರೆಯುವ ಮೂಲಕ ನೀರು ಹೊರಬಿಡಲಾಗಿದ್ದು, ಜಿಲ್ಲೆಯ ಶಹಪುರ ಮತ್ತು ವಡಗೇರಾ ತಾಲ್ಲೂಕಿನ ಪ್ರವಾಹ ಪೀಡಿತ ನದಿ ತೀರದ ಗ್ರಾಮಸ್ಥರಲ್ಲಿ ಮತ್ತೆ ಆತಂಕ ಮನೆಮಾಡಿದೆ.

ಈಗಾಗಲೇ ಜಿಲ್ಲಾಡಳಿತ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಪ್ರವಾಹ ಆತಂಕದಲ್ಲಿರುವ ಗ್ರಾಮಸ್ಥರನ್ನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುವ ಮೂಲಕ ನದಿ ತೀರದಲ್ಲಿ ಜನ ಜಾನುವಾರುಗಳು ತೆರಳದಂತೆ ಎಚ್ಚರಿಕೆ ನೀಡಿದೆ.

ABOUT THE AUTHOR

...view details