ಸುರಪುರ:ವಲಸೆ ಹೋಗಿದ್ದ ಸುರಪುರ ತಾಲೂಕಿನ ಎರಡು ಸಾವಿರಕ್ಕೂ ಹೆಚ್ಚಿನ ಮತದಾರರು ಗ್ರಾಮ ಪಂಚಾಯಿತಿ ಚುನಾವಣೆ ಅಂಗವಾಗಿ ಮತ ಚಲಾಯಿಸಲು ಬಂದು ಮರಳಿ ಗುಳೆ ಹೊರಟರು.
ಸುರಪುರ: ಬೆಂಗಳೂರು,ಪೂನಾ,ಗೋವಾದಿಂದ ಬಂದು ಸ್ವಗ್ರಾಮದಲ್ಲಿ ಮತ ಚಲಾಯಿಸಿದ ಮತದಾರರು - Surapura village panchayat election
ಜನರಿಗೆ ಉದ್ಯೋಗ ನೀಡದೇ ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಿಸಿದರೂ ಅದೇ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಮತ ಹಾಕಲು ಬಂದು ಹೋದ ಮತದಾರರ ಕುರಿತು ಇನ್ನಾದರೂ ಗ್ರಾಮ ಪಂಚಾಯಿತಿಗಳು ಜನರ ನಿಜವಾದ ಸೇವೆ ಮಾಡಬೆಕು ಎಂದು ಮತದಾರರು ಮನವಿ ಮಾಡಿದ್ದಾರೆ.
![ಸುರಪುರ: ಬೆಂಗಳೂರು,ಪೂನಾ,ಗೋವಾದಿಂದ ಬಂದು ಸ್ವಗ್ರಾಮದಲ್ಲಿ ಮತ ಚಲಾಯಿಸಿದ ಮತದಾರರು ಮತದಾರರು](https://etvbharatimages.akamaized.net/etvbharat/prod-images/768-512-9971852-thumbnail-3x2-vfhjkg.jpg)
ಸುರಪುರ ತಾಲೂಕಿನ ಎರಡು ಸಾವಿರಕ್ಕೂ ಹೆಚ್ಚಿನ ವಲಸೆ ಹೋಗಿದ್ದ ಮತದಾರರು ಬೆಂಗಳೂರು, ಪೂನಾ, ಗೋವಾ ಕಡೆಯಿಂದ ಆಗಮಿಸಿ ಮತ ಚಲಾಯಿಸಿ ಮತ್ತೆ ಗುಳೆ ಹೊರಟರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಇದ್ದರು ಕೂಡ, ಅದೇ ಗ್ರಾಮ ಪಂಚಾಯಿತಿ ಚುನಾವಣೆಗೆ ಬಂದ ಜನರಿಗೆ ಅವರ ಸ್ವಗ್ರಾಮದಲ್ಲಿ ಉದ್ಯೋಗ ಸಿಗದೆ ಗುಳೆ ಹೊರಟಿರುವುದು ಬೇಸರದ ಸಂಗತಿ ಎಂದು ಇಲ್ಲಿನ ಪ್ರಜ್ಞಾವಂತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜನರಿಗೆ ಉದ್ಯೋಗ ನೀಡದೇ ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಿಸಿದರೂ ಅದೇ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಮತ ಹಾಕಲು ಬಂದು ಹೋದ ಮತದಾರರ ಕುರಿತು ಇನ್ನಾದರೂ ಗ್ರಾಮ ಪಂಚಾಯಿತಿಗಳು ಜನರ ನಿಜವಾದ ಸೇವೆ ಮಾಡಬೆಕು ಎಂದು ಮತದಾರರು ಮನವಿ ಮಾಡಿದರು.