ಯಾದಗಿರಿ: ಕೊರೊನಾ ರಣಕೇಕೆ ಮಧ್ಯೆ ಮುಖ್ಯ ಶಿಕ್ಷಕರೊಬ್ಬರಿಗೆ ಅದ್ದೂರಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸುವ ಮೂಲಕ ನೂರಾರು ಜನ ಗುಂಪು ಸೇರಿ ಕೊರೊನಾ ವೈರಸ್ ಭೀತಿ ಹುಟ್ಟಿಸಿದ ಘಟನೆ ಜಿಲ್ಲೆಯ ವಡಗೇರಾ ತಾಲ್ಲೂಕಿನ ನೀಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ನೀಲಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಶರಣಪ್ಪ ನಡುವಿನಕೇರೆ ನಿವೃತ್ತಿಯಾಗಿದ್ದು, ಅವರ ಬೀಳ್ಕೊಡುಗೆ ಸಮಾರಂಭ ಸಮಯದಲ್ಲಿ, ಅವರನ್ನು ಅದ್ದೂರಿಯಾಗಿ ಸನ್ಮಾನಿಸಿ ಸಾರೋಟದಲ್ಲಿ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಭಾಗಿಯಾಗುವ ಮೂಲಕ ಸಾಮಾಜಿಕ ಅಂತರವಿಲ್ಲದೇ ಗುಂಪುಗುಂಪಾಗಿ ಮೆರವಣಿಗೆಯಲ್ಲಿ ಭಾಗಿಯಾಗಿ ಸರ್ಕಾರದ ಆದೇಶವನ್ನು ಉಲ್ಲಂಘಿಸಲಾಗಿದೆ.