ಸುರಪುರ: ನಗರದ ವ್ಯಕ್ತಿಯೋರ್ವ ಕೊರೊನಾ ಸೋಂಕಿನಿಂದ ಮೃತರಾಗಿದ್ದು, ಮೃತದೇಹವನ್ನು ಗ್ರಾಮದೊಳಗಿಂದ ಕೊಂಡೊಯ್ಯಲು ಜನರು ವಿರೋಧ ವ್ಯಕ್ತಪಡಿಸಿದ್ದಾರೆ.
ಸೋಂಕಿತನ ಮೃತದೇಹದ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರ ವಿರೋಧ - Villagers' opposition to dead body funeral
ಕೊರೊನಾ ಸೋಂಕಿತ ವ್ಯಕ್ತಿಯ ಮೃತದೇಹವನ್ನು ನಗರಸಭೆಯ ಜಾಗಕ್ಕೆ ಕೊಂಡೊಯ್ಯಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ರಸ್ತೆ ಬಂದ್ ಮಾಡಿದ ಘಟನೆ ನಡೆದಿದೆ.
ಮೃತ ವ್ಯಕ್ತಿಯ ದೇಹವನ್ನು ಅಂತ್ಯಸಂಸ್ಕಾರ ಮಾಡಲು ನಗರಸಭೆಯ ಜಾಗಕ್ಕೆ ಕೊಂಡೊಯ್ಯಲು ವೆಂಕಟಾಪುರ ಗ್ರಾಮದಿಂದ ಹೋಗಬೇಕಿತ್ತು. ಈ ಗ್ರಾಮದೊಳಗಿನಿಂದ ಶವ ಒಯ್ಯಲು ಬಿಡುವುದಿಲ್ಲವೆಂದು ಗ್ರಾಮಸ್ಥರು ವಿರೋಧಿಸಿ ರಸ್ತೆ ಬಂದ್ ಮಾಡಿದ ಘಟನೆ ನಡೆಯಿತು.
ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ನಗರಸಭೆಯ ಸಿಬ್ಬಂದಿ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರೂ ಒಪ್ಪಲಿಲ್ಲ. ಈ ವೇಳೆ ಸ್ಥಳಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಎಮ್.ಪಾಟೀಲ ಆಗಮಿಸಿ, ಜನರ ಮನವೊಲಿಸುವಲ್ಲಿ ಯಶಸ್ವಿಯಾದರು. ನಂತರ ಶವವನ್ನು ತೆಗೆದುಕೊಂಡು ಹೋಗಲು ಗ್ರಾಮಸ್ಥರು ಅನುವು ಮಾಡಿಕೊಟ್ಟರು. ಇದಾದ ಬಳಿಕ ನಗರಸಭೆಯ ಜಾಗದಲ್ಲಿಯೇ ಶವ ಸಂಸ್ಕಾರ ನಡೆಯಿತು.