ಯಾದಗಿರಿ:ಸುರಪುರ ತಾಲೂಕಿನ ಹುಣಸಿಹೊಳೆ ಕಣ್ವಮಠಕ್ಕೆ ನೂತನ ಪೀಠಾಧಿಪತಿ ನೇಮಕ ಮಾಡುವ ವಿಚಾರದಲ್ಲಿ ಅಪಸ್ವರ ಕೇಳಿ ಬರುತ್ತಿದ್ದು, ಮಠದ ಭಕ್ತರ ಆಯ್ಕೆಗೆ ವಿದ್ಯಾವಾರಿಧಿ ಶ್ರೀಗಳು ವಿರೋಧ ವ್ಯಕ್ತ ಪಡಿಸಿದ್ದಾರೆ.
ಮಠದ ನೂತನ ಪೀಠಾಧಿಕಾರಿ ಆಯ್ಕೆಗೆ ವಿದ್ಯಾವಾರಿಧಿ ಶ್ರೀಗಳ ವಿರೋಧ.. ಹನಿಟ್ರ್ಯಾಪ್ ವಿವಾದದಲ್ಲಿ ವಿದ್ಯಾವಾರಿಧಿ ಶ್ರೀಗಳು ಸಿಲುಕಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಯಚೂರಿನಲ್ಲಿ ನಡೆದ ಕಣ್ವಮಠದ ಭಕ್ತರ ಸಭೆಯಲ್ಲಿ ನೂತನ ಪೀಠಾಧಿಪತಿಯಾಗಿ ಶ್ರೀ ರಾಮಮೂರ್ತಿ ಆಚಾರ್ಯ ಬೆಳಗಲ್ ಅವರನ್ನು ನೇಮಿಸಲಾಗಿದೆ. ಆದರೆ, ಇದಕ್ಕೆ ಕಣ್ವಮಠದ ವಿವಾದಿತ ವಿದ್ಯಾವಾರಿಧಿ ಶ್ರೀಗಳು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಮಠದ ಅಭಿವೃದ್ಧಿ, ಹೀತ ಕಾಪಾಡಿದ ಭಕ್ತರ ಅಭಿಪ್ರಾಯ ಸಂಗ್ರಹಿಸಿಲ್ಲ. ಕೇವಲ ನನ್ನನ್ನು ದ್ವೇಷಿಸುವ ಭಕ್ತರೇ ನೂತನ ಪೀಠಾಧಿಪತಿ ನೇಮಕ ಮಾಡಿದ್ದಾರೆ. ಏಕ ಪಕ್ಷೀಯ ನಿರ್ಧಾರಕ್ಕೆ ಸುರಪುರ ಸಂಸ್ಥಾನ ಒಪ್ಪುವುದಿಲ್ಲ. ಸಿಕ್ಕವರ ಕೈಗೆ ಮಠ ಕೊಟ್ಟು ಹೋಗಲು ಸಾಧ್ಯವಿಲ್ಲ. ಎಲ್ಲ ಭಕ್ತರೂ ಸೇರಿ ಯೋಗ್ಯರನ್ನು ಆಯ್ಕೆ ಮಾಡಿದ್ದಲ್ಲಿ ಪೀಠ ಹಂಸ್ತಾಂತರಿಸುವುದಾಗಿ ವಿವಾದಿತ ಸ್ವಾಮೀಜಿ ವಿದ್ಯಾವಾರಿಧಿ ಶ್ರೀ ಹೇಳಿದ್ದಾರೆ.
ಹನಿಟ್ರ್ಯಾಪ್ ವಿವಾದದ ಮೂಲಕ ನಾಡಿನ ಜನರು ತಿರುಗಿ ನೋಡುವಂತಾಗಿದ್ದು, ಪೀಠತ್ಯಾಗ ವಿಚಾರದಲ್ಲಿಯೂ ವಿದ್ಯಾವಾರಿಧಿ ಶ್ರೀಗಳು ನಡೆಯಿಂದ ನಾಡಿನ ಜನತೆ ಮತ್ತೊಮ್ಮೆ ಹುಣಸಿಹೊಳೆ ಕಣ್ವಮಠದತ್ತ ಬಗೆಗೆ ಚರ್ಚಿಸುವಂತಾಗಿದೆ.