ಕರ್ನಾಟಕ

karnataka

ETV Bharat / state

ಬಸ್ ನಿಲ್ದಾಣದಲ್ಲಿ ಚಾಪೆ ಮೇಲೆ ಸ್ಲೀಪಿಂಗ್​: ಇದು ವಾಟಾಳ ನಾಗರಾಜ್ ವಿನೂತನ ಪ್ರತಿಭಟನೆ - ವಾಟಾಳ ನಾಗರಾಜ್ ವಿನೂತನ ಪ್ರತಿಭಟನೆ

ನವೆಂಬರ್ 17 ರಿಂದ ರಾಜ್ಯ ಸರ್ಕಾರ ಕಾಲೇಜುಗಳು ಪ್ರಾರಂಭ ಮಾಡಲು ಹೊರಟಿರುವ ಕ್ರಮ ಸರಿಯಲ್ಲ, ಕೊರೊನಾ ಸೋಂಕಿನ ಆತಂಕ ಇರುವುದರಿಂದ ರಾಜ್ಯ ಸರ್ಕಾರ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಜೀವದ ಜೊತೆ ಚಲ್ಲಾಟ ಆಡಬಾರದು ಅಂತ ವಾಟಾಳ್​ ನಾಗರಾಜ ಆಗ್ರಹಿಸಿದರು.

Vatal Nagaraj
ವಾಟಾಳ ನಾಗರಾಜ್

By

Published : Oct 24, 2020, 5:52 PM IST

ಯಾದಗಿರಿ:ಪ್ರವಾಹ ಹಾಗೂ ಅತಿವೃಷ್ಟಿಯಿಂದ ತತ್ತರಿಸಿದ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ಸರ್ಕಾರ 50 ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್​ ಪ್ರತಿಭಟನೆ ನಡೆಸಿದರು.

ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಚಾಪೆ ಮೇಲೆ ಮಲಗುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ ಅವರು​, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಲ್ಯಾಣ ಕರ್ನಾಟಕದಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಜನ ಜಾನುವಾರುಗಳು ಕೊಚ್ಚಿ ಹೋಗಿವೆ. ಮುಳುಗಡೆಯಾದ ಗ್ರಾಮಗಳನ್ನ ಸ್ಥಳಾಂತರ ಮಾಡುವಂತಹ ಕೆಲಸಗಳನ್ನು ಮಾಡುತ್ತಿಲ್ಲ. ಸಿಎಂ ಹೆಲಿಕ್ಯಾಪ್ಟರ್ ಮುಖಾಂತರ ಮೇಲುಗಡೆಯಿಂದ ವೈಮಾನಿಕ ಸಮೀಕ್ಷೆ ಮಾಡಿಕೊಂಡು ಹೋಗಿದ್ದಾರೆ. ಕೆಳಗಡೆ ಇಳಿದು ನೋಡಿದ್ರೆ ಇಲ್ಲಿನ ವಾಸ್ತವ ಪರಿಸ್ಥಿತಿ ಅರ್ಥವಾಗುತ್ತಿತ್ತು. ಅದೇ ತೆಲಂಗಾಣ, ಆಂಧ್ರ ಮತ್ತು ತಮಿಳುನಾಡಿನಲ್ಲಿ ಪ್ರವಾಹವಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ದಿಢೀರ್​ ಧಾವಿಸಿ ಬರ್ತಾರೆ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಯಾಕೆ ನಮ್ಮ ರಾಜ್ಯದಲ್ಲಾದ ಹಾನಿ ಪ್ರಧಾನಿ ಕಣ್ಣಿಗೆ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details