ಸುರಪುರ (ಯಾದಗಿರಿ):ಸುರಪುರ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ನರಸಿಂಹ ನಾಯಕ ರಾಜುಗೌಡ ಚಾಲನೆ ನೀಡಿದರು. ನಗರದ ಕುಂಬಾರ ಪೇಟೆಯ ಕುರುಬರ ಗಲ್ಲಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕನಕ ಭವನ ಕಾಮಗಾರಿಯ ಸ್ಥಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಟ್ಟು 11 ಕಾಮಗಾರಿಗಳಿಗೆ ಅಡಿಗಲ್ಲು ಹಾಕಲಾಯಿತು.
ಈ ಸಂದರ್ಭದಲ್ಲಿ ಶಾಸಕ ರಾಜುಗೌಡ ಮಾತನಾಡಿ, ಈ ಹಿಂದೆಯೇ ಕನಕ ಭವನ ಕಾಮಗಾರಿ 50 ಲಕ್ಷ ಅನುದಾನದಲ್ಲಿ ಆರಂಭಿಸಲಾಗಿದೆ, ಅದರಂತೆ ಕುಡಿಯುವ ನೀರಿನ ಕಾಮಗಾರಿಗೆ 9 ಕೋಟಿ, ಪಶುವೈದ್ಯ ಆಸ್ಪತ್ರೆ ಕಟ್ಟಡಕ್ಕೆ 42 ಲಕ್ಷ, ತಾಂತ್ರಿಕ ಕಾಲೇಜು ಬಾಲಕಿಯರ ವಸತಿ ನಿಲಯಕ್ಕೆ 3 ಕೋಟಿ 24 ಲಕ್ಷ, ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಮತ್ತು ಕುಡಿಯುವ ನೀರು ಹಾಗೂ ಚರಂಡಿ ಕಾಮಗಾರಿಗೆ 2 ಕೋಟಿ 71 ಲಕ್ಷ ಮತ್ತು ಎಸ್.ಎಫ್.ಸಿ ವಿಶೇಷ ಅನುದಾನದಡಿಯಲ್ಲಿ ಸಿಸಿ ರಸ್ತೆ ಚರಂಡಿ ಕಾಮಗಾರಿಗೆ 3 ಕೋಟಿ ಸೇರಿದಂತೆ ಒಟ್ಟು 18 ಕೋಟಿ 51 ಲಕ್ಷಕ್ಕೂ ಅಧಿಕ ಮೊತ್ತದ ಕಾಮಗಾರಿ ನಡೆಸಲಾಗುವುದು ಎಂದರು.