ಕರ್ನಾಟಕ

karnataka

ETV Bharat / state

ಗ್ರಾ.ಪಂ ಚುನಾವಣೆ ಬಹೀಷ್ಕರಿಸಿದ ವಡಗೇರ ಜನತೆ: ಸರ್ಕಾರದ ವಿರುದ್ಧ ಮಲತಾಯಿ ಧೋರಣೆ ಆರೋಪ - Vadigera people

ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಸ್ಥಾನಗಳ ಮೀಸಲಾತಿ ಅಧಿಸೂಚನೆ ಹೊರಡಿಸಿದೆ. ಇನ್ನೇನು ಎರಡು ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಎಲ್ಲಾ ಸಿದ್ದತೆ ನಡೆಸಲಾಗುತ್ತಿದೆ. ಆದ್ರೆ ವಡಗೇರ ಪಟ್ಟಣದ ಜನ ಮಾತ್ರ ಚುನಾವಣೆ ಭಹಿಷ್ಕರಿಸಲು ನಿರ್ಧರಿಸಿದ್ದಾರೆ.

ಗ್ರಾ.ಪಂ ಚುನಾವಣೆ ಭಹಿಷ್ಕರಿಸಿದ ವಡಗೇರ ಜನತೆ
ಗ್ರಾ.ಪಂ ಚುನಾವಣೆ ಭಹಿಷ್ಕರಿಸಿದ ವಡಗೇರ ಜನತೆ

By

Published : Sep 9, 2020, 6:23 PM IST

ಯಾದಗಿರಿ:ಜಿಲ್ಲೆಯ ವಡಗೇರ ಪಟ್ಟಣವನ್ನ ಶಹಾಪುರ ತಾಲೂಕಿನಿಂದ ವಿಂಗಡಿಸಿ, ಪ್ರತ್ಯೇಕ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿ ಮೂರು ವರ್ಷ ಕಳೆದಿದೆ. ತಾಲೂಕು ಅಂತ ಘೋಷಣೆ ಆದ ಮೇಲೂ ಮೂರು ವರ್ಷಗಳ ಕಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಮುಂದುವರೆದಿದೆ. ಹಾಗಾಗಿ ಪಟ್ಟಣದ ಜನತೆ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದ್ರೆ ಈಗ ಮತ್ತೆ ಗ್ರಾಮ ಪಂಚಾಯಿತಿ ಚುನಾವಣೆ ಹತ್ರ ಬಂದಿರುವ ಹಿನ್ನೆಲೆ ಸರ್ಕಾರ ವಡಗೇರ ತಾಲೂಕು ಕೇಂದ್ರವನ್ನ ಗ್ರಾಮ ವ್ಯಾಪ್ತಿಯಲ್ಲೇ ಮುಂದುವರಿಸಲು ನಿರ್ಧರಿಸಿದೆ. ಜೊತೆಗೆ ಗ್ರಾಮ ಪಂಚಾಯಿತಿ ಸ್ಥಾನಗಳ ಮೀಸಲಾತಿ ಅಧಿಸೂಚನೆ ಸಹ ಹೊರಡಿಸಿದೆ. ಇದೇ ವಿಚಾರ ವಡಗೇರ ಪಟ್ಟಣದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕು ಕೇಂದ್ರವಾಗಿ ಮೂರು ವರ್ಷವಾದ್ರು ಸರ್ಕಾರ ವಡಗೇರ ಪಟ್ಟಣವನ್ನ ನಿರ್ಲಕ್ಷ್ಯ ದೃಷ್ಟಿಯಿಂದ ನೋಡ್ತಾಯಿದೆ. ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೇಗೆರಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ ಅಂತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗ್ರಾ.ಪಂ ಚುನಾವಣೆ ಭಹಿಷ್ಕರಿಸಿದ ವಡಗೇರ ಜನತೆ

ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೆರಿಸಬೇಕಾದ್ರೆ ಪಟ್ಟಣದಲ್ಲಿ 15 ಸಾವಿರ ಜನ ಸಂಖ್ಯೆಯನ್ನ ಹೊಂದಿರಬೇಕು, ಆದ್ರೆ ವಡಗೇರ ಪಟ್ಟಣ ಎಲ್ಲಾ ಅರ್ಹತೆಯನ್ನ ಹೊಂದಿದೆ. ಆದ್ರು ಸರ್ಕಾರ ನಮ್ಮ ಪಟ್ಟಣದ ಮೇಲೆ ಮಲತಾಯಿ ಧೋರಣೆಯನ್ನ ತೋರುತ್ತಿದೆ ಎಂಬುದು ಪಟ್ಟಣದ ನಿವಾಸಿಗಳ ಮಾತಾಗಿದೆ. ಸ್ಥಳೀಯವಾಗಿ ಬಿಜೆಪಿ ಶಾಸಕರೇ ಇದ್ದಾರೆ ರಾಜ್ಯದಲ್ಲೂ ಸರ್ಕಾರವೂ ಸಹ ಬಿಜೆಪಿಯದ್ದೆ ಇದೆ. ಆದ್ರು ಸಹ ಶಾಸಕರ ನಿರ್ಲಕ್ಷ್ಯತೆಯಿಂದ ನಮ್ಮ ಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಇದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ವಿರುದ್ದ ನಾಳೆ ವಡಗೇರಾ ಪಟ್ಟಣ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಮೂರು ಹೊಸ ತಾಲೂಕುಗಳನ್ನ ಘೋಷಣೆ ಮಾಡಲಾಗಿದೆ. ಮೂರು ಹೊಸ ತಾಲೂಕುಗಳಲ್ಲಿ ಗುರುಮಠಕಲ್ ಪಟ್ಟಣ ಮೊದಲೇ ಪುರಸಭೆಯನ್ನ ಮಾಡಲಾಗಿದೆ. ಆದ್ರೆ ಇನ್ನುಳಿದಿದ್ದು ಹುಣಸಗಿ ಮತ್ತು ವಡಗೇರ ತಾಲೂಕು ಕೇಂದ್ರಗಳು. ಇದರಲ್ಲಿ ಈಗ ಅಸ್ತಿತ್ವದಲ್ಲಿರುವ ಬಿಜೆಪಿ ಸರ್ಕಾರ ಹುಣಸಗಿ ತಾಲೂಕು ಕೇಂದ್ರವನ್ನ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆರಿಸಿದೆ. ಆದ್ರೆ ವಡಗೇರ ತಾಲೂಕು ಕೇಂದ್ರವನ್ನ ಮಾತ್ರ ಇನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೇ ಮುಂದುವರೆಸಲಾಗುತ್ತಿದೆ. ಹುಣಸಗಿ ಪಟ್ಟಣದ ಜೊತೆ ವಡಗೇರ ಪಟ್ಟಣವನ್ನೂ ಸಹ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆರಿಸಬೇಕು ಎನ್ನುವುದೆ ವಡಗೇರ ಪಟ್ಟಣದ ಜನರ ಒತ್ತಾಯವಾಗಿದೆ.

ABOUT THE AUTHOR

...view details