ಕರ್ನಾಟಕ

karnataka

ETV Bharat / state

ಸುರಪುರದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಲೋಕಾರ್ಪಣೆ

ಸುರಪುರದ ಕುಂಬಾರಪೇಟೆಯ 9 ಅಡಿ ಎತ್ತರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ವೀರೇಶ್ವರ ಮಠದ ರೇವಣಸಿದ್ದೇಶ್ವರ ಸ್ವಾಮೀಜಿ ಮತ್ತು ರಾಜಾ ಕೃಷ್ಣಪ್ಪ ನಾಯಕ ಅವರು ಲೋಕಾರ್ಪಣೆ ಮಾಡಿದರು.

Unveiling Statue of Sangolli Rayanna
ಸಂಗೊಳ್ಳಿ ರಾಯಣ್ಣನ ಮೂರ್ತಿ ಲೋಕಾರ್ಪಣೆ

By

Published : Aug 15, 2020, 7:25 PM IST

ಸುರಪುರ: ನಗರದ ಕುಂಬಾರಪೇಟೆಯ ವೃತ್ತದಲ್ಲಿ ₹5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ 9 ಅಡಿ ಎತ್ತರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮದ ಆರಂಭದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಯಣ್ಣ ಪುತ್ಥಳಿಯ ಮುಂದೆ ಧ್ವಜಾರೋಹಣ ನೆರವೇರಿತು.

ತಿಂಥಣಿ ಬ್ರಿಡ್ಜ್​​​ನಲ್ಲಿಯ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀರೇಶ್ವರ ಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಸುರಪುರ ಬಲವಂತ ಬಹರಿ ಬಹದ್ದೂರ್ ಸಂಸ್ಥಾನದ ಅರಸು ವಂಶಸ್ಥ ರಾಜಾ ಕೃಷ್ಣಪ್ಪ ನಾಯಕ ಅವರು ರಾಯಣ್ಣನ ಮೂರ್ತಿ ಅನಾವರಣಗೊಳಿಸಿದರು.

ಸಂಗೊಳ್ಳಿ ರಾಯಣ್ಣನ ಪ್ರತಿಮೆ ಲೋಕಾರ್ಪಣೆ

ಸಿದ್ದರಾಮಾನಂದಪುರಿ ಸ್ವಾಮೀಜಿ ಮಾತನಾಡಿ, ಸುರಪುರ ಸಂಸ್ಥಾನಕ್ಕೂ ಕಿತ್ತೂರು ಸಂಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ. ಕಿತ್ತೂರು ಅರಸರು ಆಂಗ್ಲರ ವಿರುದ್ಧ ಹೋರಾಡಲು ಅಂದು ಮುಂದಾಳತ್ವ ವಹಿಸಿದ್ದ ರಾಯಣ್ಣ ಸುರಪುರ ಸಂಸ್ಥಾನದ ಅರಸರ ಬೆಂಬಲ ಕೋರಿದ್ದರು. ರಾಯಣ್ಣನ ಮೂರ್ತಿ ಸಂಸ್ಥಾನದ ಹೆಬ್ಬಾಗಿಲಾಗಿದ್ದ ಕುಂಬಾರಪೇಟೆಯಲ್ಲಿ ಪ್ರತಿಷ್ಠಾಪಿಸಿರುವುದು ಸಂತೋಷದ ಸಂಗತಿ ಎಂದರು.

ABOUT THE AUTHOR

...view details