ಕರ್ನಾಟಕ

karnataka

ETV Bharat / state

ರಸ್ತೆ ಬದಿಯಲ್ಲಿ ಅವೈಜ್ಞಾನಿಕ ಮ್ಯಾನ್ ಹೋಲ್ ನಿರ್ಮಾಣ: ಕಂಡರೂ ಕಾಣದಂತೆ ಕೂತಿರುವ ನಗರಸಭೆ

ನಗರದ ಮುಖ್ಯ ರಸ್ತೆಗಳಲ್ಲಿ ಒಳಚರಂಡಿ ನಿರ್ಮಿಸಿದ್ದು, ಇದರ ಜೊತೆಗೆ ಅವೈಜ್ಞಾನಿಕ ಮ್ಯಾನ್​ ಹೋಲ್​​ಗಳನ್ನು ಸಹ ನಿರ್ಮಾಣ ಮಾಡಲಾಗಿದೆ. ಆದರೆ ಈ ಮ್ಯಾನ್​ವೋಲ್​ಗಳ ಎತ್ತರ ರಸ್ತೆ ಮಟ್ಟಕ್ಕಿಂತಲೂ ಎತ್ತರದಲ್ಲಿದ್ದು, ಇದರಿಂದ ಅಪಘಾತಗಳು ಸಂಭವಿಸುತ್ತಿವೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

manhole
ಮ್ಯಾನ್ ಹೋಲ್

By

Published : Mar 3, 2020, 11:10 AM IST

ಯಾದಗಿರಿ:ನಗರದರಸ್ತೆ ಬದಿಯಲ್ಲಿ ಅವೈಜ್ಞಾನಿಕವಾಗಿ ಮ್ಯಾನ್​ಹೋಲ್​ ನಿರ್ಮಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಲ್ಲದೆ, ಈ ಮ್ಯಾನ್​ಹೋಲ್​ಗಳಿಂದ ಪ್ರತಿನಿತ್ಯ ಕಿರಿಕಿರಿ ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ.

ನಗರದ ಮುಖ್ಯ ರಸ್ತೆಗಳಲ್ಲಿ ಒಳಚರಂಡಿ ನಿರ್ಮಿಸಿದ್ದು, ಇದರ ಜೊತೆಗೆ ಅವೈಜ್ಞಾನಿಕ ಮ್ಯಾನ್​ ಹೋಲ್​​ಗಳನ್ನು ಸಹ ನಿರ್ಮಾಣ ಮಾಡಲಾಗಿದೆ. ಇವುಗಳು ರಸ್ತೆ ಮಟ್ಟಕ್ಕಿಂತಲೂ ಎತ್ತರದಲ್ಲಿರುವುದರಿಂದ ಅಪಘಾತಗಳು ಸಂಭವವಿಸುತ್ತಿವೆ ಎನ್ನುತ್ತಿದ್ದಾರೆ ಸ್ಥಳೀಯರು.

ರಸ್ತೆ ಬದಿಯಲ್ಲಿ ಅವೈಜ್ಞಾನಿಕ ಮ್ಯಾನ್ ಹೋಲ್ ನಿರ್ಮಾಣ ಆರೋಪ

ಈ ಸಮಸ್ಯೆಯನ್ನು ಸರಿಪಡಿಸಬೇಕಾದ ನಗರಸಭೆಯ ಎದರಿನ ರಸ್ತೆಗಳಲ್ಲೇ ಈ ತರಹದ ಹತ್ತಾರು ಮ್ಯಾನ್​ಹೋಲ್​​ಗಳಿವೆ. ಆದರೆ ನಗರಸಭೆ ಅಧಿಕಾರಿಗಳು ಮಾತ್ರ ಇದನ್ನು ಸರಿಪಡಿಸುವ ಗೋಜಿಗೆ ಮಾತ್ರ ಹೋಗಿಲ್ಲ ಎನ್ನಲಾಗ್ತಿದೆ.

ನಗರಸಭೆ ಕಚೇರಿ, ಸ್ವಪ್ನ ಕಾಲೇಜು ಮೈದಾನ, ಡಿಹೆಚ್​ಓ ಕಚೇರಿ ಎದುರಿನ ಬಸ್ ನಿಲ್ದಾಣ ಮುಂದೆ, ಹೀಗೆ ನಗರದ ಹಲವೆಡೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಎತ್ತರದ ಮ್ಯಾನ್​ ಹೋಲ್​​​ಗಳಿದ್ದು, ಪ್ರಯಾಣಿಕರಿಗೆ ತೊಂದರೆಯುಂಟಾಗುತ್ತಿದೆ. ಇದರಿಂದಾಗಿ ಈಗಾಗಲೇ ಸಾಕಷ್ಟು ರಸ್ತೆ ಅಪಘಾತಗಳು ಕೂಡ ಸಂಭವಿಸಿವೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ನಗರಸಭೆ ಅಧಿಕಾರಿಗಳ ಈ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೂಡಲೇ ಅಧಿಕಾರಿಗಳು ಇದನ್ನು ಸರಿಪಡಿಸಬೇಕೆಂದು ವಾಹನ ಸವಾರರು ಆಗ್ರಹಿಸುತ್ತಿದ್ದಾರೆ.

ABOUT THE AUTHOR

...view details