ಯಾದಗಿರಿ:ಅವಧಿಗೆ ಮುನ್ನ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಿಧಾನಸಭೆ ಚುನಾವಣೆ ನಡೆಯುವುದಿಲ್ಲ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಜನಾದೇಶ 5 ವರ್ಷದವರೆಗೂ ಇದೆ. ಹೀಗಾಗಿ ಆಡಳಿತ ಪೂರ್ತಿಯಾಗಿ ನಡೆಸುತ್ತೇವೆ. ಅವಧಿಗೆ ಮುನ್ನ ಚುನಾವಣೆ ಬರಲಿದೆ ಎಂದು ಪ್ರತಿಪಕ್ಷಗಳು ಸುಳ್ಳು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಹರಿಹಾಯ್ದರು.
ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ:ಪಿಎಸ್‌ಐ ಪರೀಕ್ಷೆಯಲ್ಲಿ ನಡೆದ ಅಕ್ರಮದ ದಾಖಲಾತಿಗಳು ನನ್ನ ಬಳಿ ಇವೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅವರಿಗೆ ಸಿಐಡಿ ನೋಟಿಸ್ ನೀಡಿದೆ. ವಿಚಾರಣೆಗೆ ಏಕೆ ಹಾಜರಾಗುತ್ತಿಲ್ಲ. ಅವರೇ ದಾಖಲಾತಿಗಳು ಇವೆ ಎಂದಾಗ ಪೊಲೀಸ್ ಇಲಾಖೆ ಸುಮ್ಮನೇ ಕೂರುವುದಿಲ್ಲ ಎಂದರು.