ಕರ್ನಾಟಕ

karnataka

ETV Bharat / state

ಹತ್ತಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಅನ್ಯಾಯ ಆರೋಪ.. ಡಿಸಿ ದಿಢೀರ್​ ಭೇಟಿ ನೀಡಿ ಪರಿಶೀಲನೆ - ಯಾದಗಿರಿ ಹತ್ತಿ ಖರೀದಿ ಕೇಂದ್ರ

ಅನಧಿಕೃತ ಕಡತಗಳ ಮೂಲಕ ರೈತರಿಂದ ಹಣ ವಸೂಲಿ ಮಾಡುತ್ತಿರುವ ಖರೀದಿದಾರರ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಸ್ಥಳದಲ್ಲಿದ್ದ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು..

cotton buying center
ಹತ್ತಿ ಖರೀದಿ ಕೇಂದ್ರ

By

Published : Nov 9, 2020, 8:25 PM IST

ಯಾದಗಿರಿ:ಹತ್ತಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ತೂಕ ಮತ್ತು ಅಳತೆಗಳಲ್ಲಿ ಅನ್ಯಾಯವಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಆರ್ ಅವರು ಹತ್ತಿ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ನಗರದ ವಿವಿಧ ಹತ್ತಿ ಖರೀದಿ ಕೇಂದ್ರಗಳಿಗೆ ತೆರಳಿದ ಜಿಲ್ಲಾಧಿಕಾರಿಗಳು ಅಲ್ಲಿನ ವಸ್ತುಸ್ಥಿತಿಯನ್ನು ಅವಲೋಕಿಸಿದರು. ಮುಂಡರಗಿ ರಸ್ತೆಯ ಮೌಲಾಲಿ ಅನ್ಪುರ್ ರೈಸ್ ಮಿಲ್ ಬಳಿಯಿರುವ ಹಾಗೂ ಇಂಪಿರೀಯಲ್ ಗಾರ್ಡನ್, ಯಾದಗಿರಿ ಬಸ್ ಘಟಕದ ಹತ್ತಿ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿದರು.

ಕೇಂದ್ರಗಳಲ್ಲಿ ರೈತರಿಗೆ ನೀಡಲಾದ ಬಿಲ್‌ಗಳನ್ನ ಪರಿಶೀಲಿಸಿದರು. ಈ ವೇಳೆ ಅನಧಿಕೃತ ಕಡತಗಳ ಮೂಲಕ ರೈತರಿಂದ ಹಣ ವಸೂಲಿ ಮಾಡುತ್ತಿರುವ ಖರೀದಿದಾರರ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಸ್ಥಳದಲ್ಲಿದ್ದ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಡಿಸಿ ಡಾ.ರಾಗಪ್ರಿಯ ಆರ್ ಅವರು ಹತ್ತಿ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ..

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರಾದ ಗಿರೀಶ್, ಗ್ರಾಮ ಲೆಕ್ಕಿಗರಾದ ಶ್ರೀಧರ್ ಬಡಿಗೇರ್ ಹಾಜರಿದ್ದರು.

ABOUT THE AUTHOR

...view details