ಯಾದಗಿರಿ: ಸಿಡಿಲು ಬಡಿದು ಎರಡು ಎತ್ತುಗಳು ಸಾವನ್ನಪ್ಪಿದ ಘಟನೆ ತಾಲೂಕಿನ ಯರಗೋಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಸಿಡಿಲು ಬಡಿದು ಎರಡು ಎತ್ತುಗಳು ಸಾವು - ಯಾದಗಿರಿ ಸಿಡಿಲು ಬಡಿದು ಎತ್ತುಗಳು ಸಾವು
ಜೀವನಕ್ಕೆ ಆಧಾರವಾಗಿದ್ದ ಎರಡು ಎತ್ತುಗಳು ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಜರುಗಿದೆ.
ಸಿಡಿಲು ಬಡಿದು ಎರಡು ಎತ್ತುಗಳು ಸಾವು
ಹಣಮಂತಪ್ಪ ಚಿಕ್ಕಬಾನರ ಎಂಬ ರೈತನಿಗೆ ಸೇರಿದ ಎತ್ತುಗಳು ಸಾವನ್ನಪ್ಪಿವೆ. ಗ್ರಾಮದ ಹೊರ ವಲಯದ ಮಲಕಪ್ಪನಹಳ್ಳಿ ರಸ್ತೆ ಬಳಿಯ ಜಮೀನಿನ ಗುಡಿಸಿಲಿನಲ್ಲಿ ಎತ್ತುಗಳನ್ನ ಕಟ್ಟಿದ್ದಾಗ ಈ ಅವಘಡ ಸಂಭವಿಸಿದೆ. ಸುಮಾರು 1.5 ಲಕ್ಷ ರೂ. ಮೌಲ್ಯದ ಎತ್ತುಗಳನ್ನ ಕಳೆದುಕೊಂಡ ರೈತನಿಗೆ ಬರಸಿಡಿಲು ಬಡಿದಂತಾಗಿದೆ.
ಸ್ಥಳಕ್ಕೆ ಪಶುಪಾಲನಾ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ ಸುಬೇದಾರ ಸೇರಿದಂತೆ ಗ್ರಾಮೀಣ ಪೋಲಿಸ್ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.