ಯಾದಗಿರಿ: ಟಂಟಂ ವಾಹನ ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ದುರ್ಘಟನೆ ಯಾದಗಿರಿ ತಾಲೂಕಿನ ಸೈದಾಪುರ ಗ್ರಾಮದ ಸಮೀಪ ನಡೆದಿದೆ.
ಸೈದಾಪುರ ಬಳಿ ಟಂಟಂ ವಾಹನ-ಲಾರಿ ಡಿಕ್ಕಿ: ಇಬ್ಬರು ದುರ್ಮರಣ - ಅಪಘಾತದಲ್ಲಿ ಇಬ್ಬರ ಸಾವು ಯಾದಗಿರಿ ಸುದ್ದಿ
ಟಂಟಂ ವಾಹನ ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ದುರ್ಘಟನೆ ಯಾದಗಿರಿ ತಾಲೂಕಿನ ಸೈದಾಪುರ ಗ್ರಾಮದ ಸಮೀಪ ನಡೆದಿದೆ.
ಟಂಟಂ ವಾಹನ ಹಾಗೂ ಲಾರಿ ಡಿಕ್ಕಿ ಇಬ್ಬರ ಸಾವು
ಚಕ್ರತಾಂಡಾದ ನಿವಾಸಿಗಳಾದ ಠಾಕ್ರೆ ಚವ್ಹಾಣ್ (40) ಹಾಗೂ ಚನ್ಯಾ (30) ಮೃತರು. ಇನ್ನು ಘಟನೆಯಲ್ಲಿ 6 ಜನರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Oct 22, 2019, 3:06 PM IST