ಗುರುಮಠಕಲ್(ಯಾದಗಿರಿ): ಲಾಕ್ಡೌನ್ ಆರಂಭವಾದ ದಿನದಿಂದ ಈವರೆಗೆ ಜೀವದ ಹಂಗು ತೊರೆದು ಕೊವೀಡ್-19 ವಿರುದ್ಧ ಹಗಲಿರುಳು ಹೋರಾಟ ಮಾಡುತ್ತಿರುವ ಪಟ್ಟಣದಲ್ಲಿ ಕೊರೊನಾ ವಾರಿಯರ್ಸ್ಗೆ ಗೌರವ ಸಲ್ಲಿಸಲಾಯಿತು.
ಗುರುಮಠಕಲ್ ಕೊರೋನಾ ವಾರಿಯರ್ಸಗೆ ಪುಷ್ಪಾರ್ಚನೆ ಮೂಲಕ ಗೌರವ ಸಮರ್ಪಣೆ - Gurmatkal of Yadagiria
ಬಿಜೆಪಿ ಜಿಲ್ಲಾಧ್ಯಕ್ಷ ಶರಣಭುಪಾಲರೆಡ್ಡಿ, ಸಾಯಬಣ್ಣ ಬೋರಬಂಡ ಹಾಗೂ ತಂಡದಿಂದ ಕೊರೊನಾ ವಾರಿಯರ್ಸ್ಗೆ ಪುಷ್ಪಾರ್ಚನೆ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಶರಣಭುಪಾಲರೆಡ್ಡಿ, ಸಾಯಬಣ್ಣ ಬೋರಬಂಡ ಹಾಗೂ ತಂಡದಿಂದ ಪುಷ್ಪಾರ್ಚನೆ ಮೂಲಕ ಸನ್ಮಾನಿಸಿ ಗೌರವಿಸಲಾಯಿತು. ಗುರುಮಠಕಲ್ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಆರೋಗ್ಯ ಇಲಾಖೆಯ ವೈದ್ಯರು, ನರ್ಸ್ಗಳು ಹಾಗೂ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆ, ಪುರಸಭೆ ಸಿಬ್ಬಂದಿ, ಕಂದಾಯ ಇಲಾಖೆಯ ಸಿಬ್ಬಂದಿಯನ್ನು ಗೌರವಿಸಿ ಪುಷ್ಪಾರ್ಚನೆ ಮಾಡಲಾಯಿತು.
ಖಾಸಾಮಠದ ಶಾಂತವೀರ ಗುರು ಮರುಘರಾಜೇಂದ್ರ ಸ್ವಾಮಿಗಳು, ಪೊಲೀಸ್ ಇಲಾಖೆಯ ಸಿಪಿಐ ದೇವಿಂದ್ರಪ್ಪ ದೊಳಖೇಡ್, ಪಿಎಸ್‌ಐ ಶೀಲಾದೇವಿ ನ್ಯಾಮನ್, ಆರೋಗ್ಯ ಇಲಾಖೆಯ ಡಾ. ಹಣ್ಮಂತುರೆಡ್ಡಿ ಸೇರಿದಂತೆ ಹಲವರು ಈ ವೇಳೆ ಭಾಗಿಯಾಗಿದ್ದರು.