ಯಾದಗಿರಿ :ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಸಾವುನ್ನಪ್ಪಿರುವ ಘಟನೆ ಹುಣಸಗಿ ಪಟ್ಟಣದ ಕಕ್ಕೇರಾ ಕ್ರಾಸ್ ಹತ್ತಿರ ಭಾನುವಾರ ರಾತ್ರಿ ನಡೆದಿದೆ. ಮೃತರು ಕೋಟೆಗುಡ್ಡದ ಗ್ರಾಮದ ಕುರಿಗಾಹಿಗಳಾದ ಬಾಲಪ್ಪ (55), ಜಟ್ಟೆಪ್ಪ (60) ಹಾಗೂ ಕೊಡೇಕಲ್ ಗ್ರಾಮದ ತರಕಾರಿ ವ್ಯಾಪಾರಿಯಾದ ಪರಸಪ್ಪ (45) ಎಂದು ಗುರುತಿಸಲಾಗಿದೆ.
ಡಿ.25 ರ ಸಂಜೆ ವೇಳೆ ಪರಸಪ್ಪ ಎಂಬುವವರು ಬೈಕ್ ಮೇಲೆ ಕೊಡೇಕಲ್ಗೆ ಹೋಗುತ್ತಿದ್ದರು. ರಘುನಾಥಪೂರ ಕ್ಯಾಂಪ್ ಕ್ರಾಸ್ ಹತ್ತಿರ ಎದುರುಗಡೆಯಿಂದ ಜಟ್ಟೆಪ್ಪ ಎಂಬುವವರ ಬೈಕ್ ಬರುತ್ತಿತ್ತು. ಈ ವೇಳೆ, ಎರಡು ಬೈಕ್ಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.