ಯಾದಗಿರಿ:ಜಿಲ್ಲೆಯ ಶಹಾಪುರ ತಾಲೂಕಿನ ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್ಯ ಹೆದ್ದಾರಿಯ ಮುಡಬೂಳ ಗ್ರಾಮದ ಕ್ರಾಸ್ ಬಳಿ ಬಸ್ ಹಾಗೂ ಕಾರಿನ ನಡುವೆ ಮಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವುನ್ನಪ್ಪಿದ್ದು, ಇನ್ನೋರ್ವ ಆಸ್ಪತ್ರೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಇದನ್ನೂ ಓದಿ:ಕಾರಿನ ಮೇಲೆ ಟ್ಯಾಂಕರ್ ಪಲ್ಟಿ.. ಮೂವರು ಮಕ್ಕಳು ಸೇರಿ 9 ಮಂದಿ ಸಾವು
ಸುರಪುರ ತಾಲೂಕಿನ ರಂಗಂಪೇಟ ಗ್ರಾಮದ ನಾಗರಾಜ ಸಿದ್ದಣ್ಣ ಸಜ್ಜನ (60), ಮಹಾದೇವಿ ನಾಗರಾಜ ಸಜ್ಜನ (55), ರೇಣುಕಾ ನಾರಾಯಣರಾವ್ ಪಾಡಮುಖಿ(62) ಮೃತರು. ಕಲಬುರಗಿಯಲ್ಲಿ ಸ್ನೇಹಿತನ ಮಗನ ಮದುವೆ ಕಾರ್ಯಕ್ರಮವನ್ನು ಮುಗಿಸಿಕೊಂಡು ಕಾರ್ ಚಲಾಯಿಸಿಕೊಂಡು ನಾಗರಾಜ ಬರುತ್ತಿದ್ದರು.