ಕರ್ನಾಟಕ

karnataka

ETV Bharat / state

2 ಕಾರುಗಳ ನಡುವೆ ಭೀಕರ ಅಪಘಾತ : ಮೂವರು ಸ್ನೇಹಿತರು ದುರ್ಮರಣ! - ಮೂವರು ಸ್ನೇಹಿತರು ದುರ್ಮರಣ

ಎರಡು ಕಾರುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ನೇಹಿತರು ಸಾವನಪ್ಪಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸೂಗುರು ಗ್ರಾಮದ ಗೊಲ್ಲಪಲ್ಲಿ ಬಳಿ ಈ ದುರ್ಘಟನೆ ನಡೆದಿದೆ..

road accident
ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ

By

Published : Apr 23, 2022, 11:30 AM IST

ಯಾದಗಿರಿ : ಎರಡು ಕಾರುಗಳು ಪರಸ್ಪರ ಡಿಕ್ಕಿಯಾಗಿ ವಡಗೇರಾ ತಾಲೂಕಿನ ಮೂವರು ಸ್ನೇಹಿತರು ಮೃತಪಟ್ಟ ದಾರುಣ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗುರು ಗ್ರಾಮದ ಗೊಲ್ಲಪಲ್ಲಿ ಬಳಿ ನಡೆದಿದೆ. ಟಿ ವಡಗೇರಾ ಗ್ರಾಮದ ಅಂಬರೀಶ್ (27), ದೇವಿಂದ್ರಪ್ಪ (26) ಹಾಗೂ ಗೋವಿಂದ (24) ಮೃತ ದುರ್ದೈವಿಗಳು.

ಭೀಕರ ಅಪಘಾತ : ಮೂವರು ಸ್ನೇಹಿತರು ದುರ್ಮರಣ

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಗ್ರಾಮದ ಬಸಯ್ಯ ಸ್ವಾಮಿ(ಸ್ನೇಹಿತ) ಎಂಬುವರು ಮೃತಪಟ್ಟಿದ್ದರು. ಮೃತ ಬಸಯ್ಯಸ್ವಾಮಿ ಅವರ ಅಂತ್ಯಕ್ರಿಯೆ ಟಿ. ವಡಗೇರಾ ಗ್ರಾಮದಲ್ಲಿ ನೆರವೇರಿಸಲಾಗುತ್ತಿತ್ತು. ಈ ಹಿನ್ನೆಲೆ ಸ್ನೇಹಿತನ ಅಂತ್ಯಕ್ರಿಯೆ ಕಾರ್ಯದಲ್ಲಿ ಭಾಗಿಯಾಗಲು ಐದು ಜನ ಸ್ನೇಹಿತರು ಬೆಂಗಳೂರನಿಂದ ಕಾರಿನಲ್ಲಿ ಬರುತ್ತಿದ್ದರು.

ಈ ವೇಳೆ ದುರ್ಘಟನೆ ಜರುಗಿದ್ದು, ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಇನ್ನು ಕಾರಿನಲ್ಲಿದ್ದ ಇನ್ನಿಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ:ಮಕ್ಕಳ ಮೇಲೆ ವಾಮಾಚಾರದ ಶಂಕೆ.. ಊಟ ಮಾಡುತ್ತಿದ್ದ ಚಿಕ್ಕಪ್ಪ-ಚಿಕ್ಕಮ್ಮಳನ್ನು ಕೊಚ್ಚಿ ಕೊಲೆ ಮಾಡಿದ ಮಗ!

ABOUT THE AUTHOR

...view details