ಗುರುಮಠಕಲ್(ಯಾದಗಿರಿ): ಜಿಂಕೆ ಬೇಟೆಯಾಡಿದ ಮೂವರನ್ನು ಯಾದಗಿರಿ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಅಮೀರ್ ಖಾನ್, ನಾಗರೆಡ್ಡಿ ಹಾಗೂ ಹುಸೇನ್ ಬಂಧಿತರು. ಇಬ್ಬರು ಆರೋಪಿಗಳು ತಲೆಮರೆಸಿಸಿಕೊಂಡಿದ್ದು, ಶೋಧ ನಡೆಯುತ್ತಿದೆ. ಆರೋಪಿಗಳಿಂದ ಜಿಂಕೆ ಮಾಂಸ ಜಪ್ತಿ ಮಾಡಲಾಗಿದೆ.
ಜಿಂಕೆ ಮಾಂಸ ಮಾರಾಟ: ಯಾದಗಿರಿಯಲ್ಲಿ ಮೂವರ ಬಂಧನ - ಮಾಂಸ ಮಾರಾಟ
ಜಿಂಕೆ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಮೂವರನ್ನು ಯಾದಗಿರಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
![ಜಿಂಕೆ ಮಾಂಸ ಮಾರಾಟ: ಯಾದಗಿರಿಯಲ್ಲಿ ಮೂವರ ಬಂಧನ ಜಿಂಕೆ ಮಾಂಸ ಮಾರಾಟ](https://etvbharatimages.akamaized.net/etvbharat/prod-images/768-512-15671018-thumbnail-3x2-yyy.jpg)
ಜಿಂಕೆ ಮಾಂಸ ಮಾರಾಟ
ಗುರುಮಠಕಲ್ ತಾಲೂಕಿನ ಯಲಸತ್ತಿಯ ಅರಣ್ಯ ಪ್ರದೇಶದಲ್ಲಿ ಬೇಟೆಯಾಡಿ ಅರೀಫ್ ಖಾನ್ ಎಂಬುವವರ ಮನೆಯಲ್ಲಿ ಮಾಂಸ ಸಂಗ್ರಹಿಸಲಾಗಿತ್ತು. ಮೂವರು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ಜ್ಯುವೆಲ್ಲರಿ ಶಾಪ್ನಲ್ಲಿ ಕಳ್ಳತನ.. ಮಾಲೀಕನನ್ನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!