ಸುರಪುರ:ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಆಗಮಿಸುತ್ತಿರುವ ಗುಳೆ ಕಾರ್ಮಿಕರ ಆರೋಗ್ಯ ತಪಾಸಣೆ ಮತ್ತಿತರೆ ಕಾರ್ಯಕ್ರಮಗಳಿಗಾಗಿ ತಹಶೀಲ್ದಾರ್ ಕಚೇರಿಯಲ್ಲಿ ಕೊರೊನಾ ಟಾಸ್ಕ್ ಫೋರ್ಸ್ ಸಭೆ ನಡೆಯಿತು.
ಹೊರ ರಾಜ್ಯದಿಂದ ಬಂದವರ ಆರೋಗ್ಯ ತಪಾಸಣೆ ಮಾಡಲಾಗುವುದು: ಸುರಪುರ ತಹಶೀಲ್ದಾರ್
ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಆಗಮಿಸುತ್ತಿರುವ ಗುಳೆ ಕಾರ್ಮಿಕರ ಆರೋಗ್ಯ ತಪಾಸಣೆ ಮತ್ತಿತರೆ ಕಾರ್ಯಕ್ರಮಗಳಿಗಾಗಿ ತಹಶೀಲ್ದಾರ್ ಕಚೇರಿಯಲ್ಲಿ ಕೊರೊನಾ ಟಾಸ್ಕ್ ಫೋರ್ಸ್ ಸಭೆ ನಡೆಯಿತು.
ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ನಿಂಗಣ್ಣ ಬಿರಾದಾರ್ ಸಭೆಯ ಕುರಿತು ಮಾಹಿತಿ ನೀಡಿ, ಮಹಾರಾಷ್ಟ್ರ-ಗೋವಾ ರಾಜ್ಯಗಳಿಗೆ ಗುಳೆ ಹೋಗಿ ಬರುತ್ತಿರುವ ಮೂರರಿಂದ ನಾಲ್ಕು ಸಾವಿರ ಜನರ ನಿರೀಕ್ಷೆ ಇದೆ. ಎಲ್ಲರನ್ನು ಮೊದಲು ಕವಡಿಮಟ್ಟಿ ಬಳಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಫೀವರ್ ಚೆಕ್ ಮಾಡಿಸಿ ನಂತರ ಕ್ವಾರಂಟೈನ್‌ನಲ್ಲಿ ಉಳಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ.ನಾಯಕ ಮಾತನಾಡಿ, ಮೊದಲು ಎಲ್ಲರ ಆರೋಗ್ಯ ತಪಾಸಣೆಯ ನಂತರ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಿ ನಿತ್ಯವು ತಪಾಸಣೆ ನಡೆಸಲಾಗುವುದು. ಅಲ್ಲದೆ ಬೇರೆ ರಾಜ್ಯದಿಂದ ಬರುವವರು ಆ ರಾಜ್ಯದಲ್ಲಿ ಪಟ್ಟಣ ಪ್ರದೇಶಗಳಲ್ಲಿದ್ದು ಬಂದವರಿಗೆ ಇಲ್ಲಿಯ ಕ್ವಾರಂಟೈನ್ ಹಾಗೂ ಆ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿದ್ದು ಬಂದವರನ್ನು ಹೋಮ್ ಕ್ವಾರಂಟೈನಲ್ಲಿ ಇರಿಸಲಾಗುವುದು ಎಂದು ತಿಳಿಸಿದರು.