ಕರ್ನಾಟಕ

karnataka

ETV Bharat / state

ಯಾದಗಿರಿ : ₹4,60,000 ಹಣ ದೋಚಿ ಪರಾರಿಯಾದ ಕಳ್ಳ.. ವಿಡಿಯೋ ವೈರಲ್​.. - ಯಾದಗಿರಿಯ ತೆಂಗಿನ ಕಾಯಿ ಅಂಗಡಿಯಲ್ಲಿ ಹಣ ಕಳವು

ಸಿಸಿ ಟಿವಿ ದೃಶ್ಯದಲ್ಲಿನ ವ್ಯಕ್ತಿ ಬಗ್ಗೆ ಮಾಹಿತಿಯಿದ್ದರೆ ಶಹಾಪುರ ನಗರ ಠಾಣೆಗೆ ಮಾಹಿತಿ ನೀಡಬೇಕು ಹಾಗೂ ತಕ್ಷಣ ಮೊ : 9480803578ಗೆ ಕರೆ ಮಾಡುವಂತೆ ಜಿಲ್ಲಾ ಎಸ್​ಪಿ ವೇದಮೂರ್ತಿ ಅವರು ಕೋರಿದ್ದಾರೆ..

thief-stolen-money-from-shop-in-yadagiri
ಹಣ ದೋಚಿ ಪರಾರಿ

By

Published : Feb 4, 2022, 3:09 PM IST

ಯಾದಗಿರಿ : ಜಿಲ್ಲೆಯ ಶಹಾಪುರ ನಗರದ ತೆಂಗಿನ ಕಾಯಿ ವ್ಯಾಪಾರಿಯೊಬ್ಬರ ಅಂಗಡಿಯೊಂದರಲ್ಲಿ ರಾತ್ರೋರಾತ್ರಿ ಅಪರಿಚಿತ ವ್ಯಕ್ತಿ 4,60,000 ರೂ. ಹಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಲಕ್ಷಾಂತರ ರೂ. ಹಣ ದೋಚಿರುವ ಕುರಿತಂತೆ ಜಿಲ್ಲಾ ಪೊಲೀಸ್‌ ವರಿಷ್ಠ ವೇದಮೂರ್ತಿ ಮಾಹಿತಿ ನೀಡಿರುವುದು..

ಕಳ್ಳತನವಾಗಿರುವ ತೆಂಗಿನಕಾಯಿ ಅಂಗಡಿ ಶಿವಶರಣಪ್ಪ ಗೊಳಗೇರಿ ಎಂಬುವರಿಗೆ ಸೇರಿದ್ದಾಗಿದೆ. ಅಪರಿಚಿತ ವ್ಯಕ್ತಿ ನಿನ್ನೆ ರಾತ್ರಿ ಅಂಗಡಿಯ ಶಟರ್ ಮುರಿದು, ಅಂಗಡಿಯ ಗಲ್ಲಾ ಪೆಟ್ಟಿಗೆಯಲ್ಲಿದ್ದ 4,60,000 ರೂ.ಗಳನ್ನು ದೋಚಿಕೊಂಡು ಹೋಗಿರುತ್ತಾನೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುತ್ತದೆ. ಈ ಕುರಿತು ಶಹಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸಿಸಿ ಟಿವಿ ದೃಶ್ಯದಲ್ಲಿನ ವ್ಯಕ್ತಿ ಬಗ್ಗೆ ಮಾಹಿತಿಯಿದ್ದರೆ ಶಹಾಪುರ ನಗರ ಠಾಣೆಗೆ ಮಾಹಿತಿ ನೀಡಬೇಕು ಹಾಗೂ ತಕ್ಷಣ ಮೊ : 9480803578ಗೆ ಕರೆ ಮಾಡುವಂತೆ ಜಿಲ್ಲಾ ಎಸ್​ಪಿ ವೇದಮೂರ್ತಿ ಅವರು ಕೋರಿದ್ದಾರೆ. ಸಾರ್ವಜನಿಕರು ಹೆಚ್ಚಿನ ಮೊತ್ತದ ಹಣವಿದ್ದಾಗ ಜಾಗೃತಿ ವಹಿಸಲು ಸೂಚಿಸಲಾಗಿದೆ.

ಓದಿ:ಕೇಶವ ಕೃಪ, ಜಗನ್ನಾಥ ಭವನದ ಒತ್ತಡಕ್ಕೆ ಮಣಿಯುತ್ತಾರಾ ನಿಗಮ ಮಂಡಳಿ ಅಧ್ಯಕ್ಷರು?

For All Latest Updates

ABOUT THE AUTHOR

...view details