ಯಾದಗಿರಿ: ಜಿಲ್ಲಾದ್ಯಂತ ಸುರಿಯುತ್ತಿರುವ ವರುಣನ ಅರ್ಭಟಕ್ಕೆ ತಾಲೂಕಿನ ಮಲ್ಹಾರ ಗ್ರಾಮದಲ್ಲಿನ ಮನೆಯೊಂದರ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ರೈತ ಸಂಗ್ರಹಿಸಿಟ್ಟ ಅಪಾರ ಪ್ರಮಾಣದ ಹತ್ತಿ ಬೆಳೆ ನಾಶವಾಗಿರುವ ಘಟನೆ ಜರುಗಿದೆ.
ಯಾದಗಿರಿ: ಮನೆಯ ಮೇಲ್ಛಾವಣಿ ಕುಸಿತ, ಶೇಖರಿಸಿಟ್ಟಿದ್ದ ಹತ್ತಿ ನಾಶ - ಯಾದಗಿರಿ ಜಿಲ್ಲೆಯಲ್ಲಿ ಮನೆಗಳಿಗೆ ನುಗ್ಗಿದ ನೀರು
ವರುಣನ ಅರ್ಭಟಕ್ಕೆ ಮೆನೆ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಮನೆಯಲ್ಲಿ ಶೇಖರಿಸಿಟ್ಟ ಅಪಾರ ಪ್ರಮಾಣದ ಹತ್ತಿ ನೀರುಪಾಲಾಗಿದೆ.
ಮನೆಯ ಮೇಲ್ಛಾವಣಿ ಕುಸಿತ
ಮಲ್ಹಾರ ಗ್ರಾಮದ ಕಳಸಪ್ಪ ಎಂಬುವರ ಮೆನೆ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಮನೆಯಲ್ಲಿ ಶೇಖರಿಸಿಟ್ಟ ಅಪಾರ ಪ್ರಮಾಣದ ಹತ್ತಿ ನೀರುಪಾಲಾಗಿದೆ. ಕಷ್ಟ ಪಟ್ಟು ಬೆಳೆದ ಹತ್ತಿ ಬೆಳೆ ರಾಶಿ ಮಾಡಿ ಮನೆಯಲ್ಲಿಟ್ಟದ್ದು, ಮೇಲ್ಛಾವಣಿ ಕುಸಿತದಿಂದ ಮನೆ ಕಳೆದುಕೊಂಡ ರೈತ ಕಳಸಪ್ಪನ ಕುಟುಂಬ ಈಗ ಬೀದಿಗೆ ಬೀಳುವಂತಾಗಿದೆ. ಗ್ರಾಮದ ಬೇರೆಯೊಬ್ಬರ ಮನೆಯಲ್ಲಿ ಆಶ್ರಯ ಪಡೆದ ಕುಟುಂಬ ಸಹಾಯಕ್ಕಾಗಿ ಅಂಗಲಾಚುತ್ತಿದ್ದು, ತಮ್ಮ ಹಾನಿಯನ್ನ ಭರಿಸಿಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.