ಯಾದಗಿರಿ: ಜಿಲ್ಲೆಯಲ್ಲಿ ಭೀಕರ ಬರಗಾಲ ಉದ್ಭವಿಸಿದ ಹಿನ್ನೆಲೆಯಲ್ಲಿ ಜಮೀನನಲ್ಲಿರುವ ಪೈರುಗಳು ನೀರಿಲ್ಲದೇ ಒಣಗಿ ಹೋಗಿವೆ. ಇಂತಹ ಪರಿಸ್ಥಿತಿಯಲ್ಲಿ ರೈತನೊಬ್ಬ ತನ್ನ ಜಮೀನಿನಲ್ಲಿ ಹಚ್ಚ ಹಸಿರು ಮೂಡಿಸುವ ಮೂಖಾಂತರ ತನ್ನ ಬದುಕನ್ನೆ ಹಸನಾಗಿಸಿ ಕೊಂಡಿದ್ದಾನೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಳ್ಳಿ ಗ್ರಾಮದ ರೈತ ತನ್ನ ಹೊಲದಲ್ಲಿ ಪಪ್ಪಾಯಿ ಸಸಿಗಳನ್ನು ನೆಡುವ ಮುಖಾಂತರ ತನ್ನ ಜೀವನದ ದಿಕ್ಕನ್ನೇ ಬದಲಾಯಿಸಿಕೊಂಡಿದ್ದಾರೆ. ಚಿಕ್ಕನಳ್ಳಿ ಗ್ರಾಮದ ರೈತ ಗುರು ಎನ್ನುವವರು ಪಪ್ಪಾಯಿ ಬೆಳೆಯುವ ಮುಖಾಂತರ ಆರ್ಥಿಕ ಪರಿಸ್ಥಿತಿಯಲ್ಲಿ ಬಲಿಷ್ಟರಾಗಿದ್ದು ಉಳಿದ ರೈತ ಸಮೂಹಕ್ಕೆ ಮಾದರಿಯಾಗಿದ್ದಾರೆ.
ರೈತ ಗುರು ತಮ್ಮ ಜಮೀನಿನಲ್ಲಿ ಮುಂಗಾರು ಹಾಗೂ ಹಿಂಗಾರು ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ, ಯಾವುದೇ ಲಾಭದಾಯಕ ಇಲ್ಲದ ಪರಿಣಾಮ ನಷ್ಟವನ್ನು ಅನುಭವಿಸಿದರು. ಇದರಿಂದ ಬೇಸತ್ತ ರೈತ ಮುಂಗಾರು ಬೆಳೆಗಳಿಗೆ ವಿದಾಯ ಹೇಳಿ ಮಿಶ್ರ ಬೆಳೆಗಳಿಗೆ ಮುಖ ಮಾಡಿದರು. ತದನಂತರ ತೋಟಗಾರಿಕೆ ಇಲಾಖೆ ಸಂಪರ್ಕಿಸಿ ಮಿಶ್ರ ಬೆಳಗೆಳಿಗೆ ಹೆಜ್ಜೆ ಹಾಕಿದರು ಜೊತೆಗೆ ಸರಕಾರಿ ಯೋಜನೆ ಲಾಭ ಪಡೆದುಕೊಂಡು ಜಮೀನಿನಲ್ಲಿ ಪಪ್ಪಾಯಿ ಬೆಳೆದು, ಬೆಳೆದಂತಹ ಬೆಳೆಗಳನ್ನು ಮುಂಬೈಗೆ ರಪ್ತು ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆ ಬಾರದ ಹಿನ್ನೆಲೆಯಲ್ಲಿ ಜಮೀನಗಳು ಒಣಗಿ ಕಮರಿ ಹೋಗಿವೆ. ಇಂತಹ ಪರಿಸ್ಥಿತಿಯಲ್ಲಿ ರೈತ ಗುರು ಪಪ್ಪಾಯಿ ಹಣ್ಣುಗಳನ್ನು ಬೆಳದು ರೈತ ಸಂಕುಲಕ್ಕೆ ಮುನ್ನಡಿ ಬರೆದಿದ್ದಾರೆ. ಗುರು ತನ್ನ ನಾಲ್ಕು ಎಕರೆ ಜಮೀನಿನಲ್ಲಿ ಸುಮಾರು 6 ರಿಂದ 8 ಲಕ್ಷ ರೂ ಬಂಡವಾಳ ಹೂಡಿ ಪಪ್ಪಾಯಿ ಬೆಳೆದಿದ್ದಾರೆ. ಎಕರೆಗೆ 2 ಲಕ್ಷ ರೂಪಾಯಿಯಂತೆ ನಾಲ್ಕು ಎಕರೆ ಜಮೀನಿಗೆ 8 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ, ಹೂಡಿದ ಬಂಡವಾಳದಿಂದ ಹನ್ನೊಂದು ತಿಂಗಳಲ್ಲಿ 8 ಲಕ್ಷ ರೂ. ಪಡೆದುಕೊಂಡಿದ್ದು, ಆರ್ಥಿಕವಾಗಿ ಲಾಭ ಪಡೆದಕೊಂಡಿದ್ದಾರೆ. ತಿಂಗಳಲ್ಲಿ ವಾರಕ್ಕೆ 2 ಬಾರಿಯಂತೆ ಹತ್ತು ಟನ್ಗಳಷ್ಟು ಪಪ್ಪಾಯಿ ಹಣ್ಣಗಳನ್ನು ಬೆಳೆದು ಬಾಂಬೆ, ಪೂನಾಕ್ಕೆ ರವಾನಿಸುವ ಮುಖಾಂತರ ಜಿಲ್ಲೆಯ ರೈತರಿಗೆ ಮಾದರಿಯಾಗಿದ್ದಾರೆ.
ಭೀಕರ ಬರಗಾಲದಲ್ಲಿ ರೈತನ ಬದುಕು ಬಂಗಾರು