ಯಾದಗಿರಿ: ಬುದ್ಧಿ ಮಾತು ಹೇಳಿದ ಎಂದು ಕೋಪಗೊಂಡ ಅಣ್ಣ ತನ್ನ ಸ್ವಂತ ತಮ್ಮನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಎಂಪಾಡ ಗ್ರಾಮದಲ್ಲಿ ನಡೆದಿದೆ. ದೇವಿಂದ್ರ (28) ಎಂಬಾತ ಕೊಲೆಯಾದ ತಮ್ಮ. ಜಯರಾಮ ಎಂಬಾತ ಕೊಲೆ ಮಾಡಿದ ಆರೋಪಿ ಅಣ್ಣ.
ಜಯರಾಮ್ ಹಾಗೂ ದೇವಿಂದ್ರ ಸಹೋದರರು ಯುಗಾದಿ ಹಬ್ಬದ ಹಿನ್ನೆಲೆ ಊರಿಗೆ ಬಂದಿದ್ದರು. ಭಾನುವಾರ ರಾತ್ರಿ ಇಬ್ಬರು ಸಹೋದರರ ನಡುವೆ ಜಗಳ ಪ್ರಾರಂಭವಾಗಿದೆ. ಈ ವೇಳೆ ದೇವಿಂದ್ರ, ನೀನು ಜಮ್ಲಾನಾಯಕ ಮಕ್ಕಳ ಸಹವಾಸ ಮಾಡಬೇಡ ಎಂದು ಬುದ್ಧಿ ಹೇಳಿದ್ದಾನೆ.