ಯಾದಗಿರಿ: ನದಿಯ ನಡುಗಡ್ಡೆಯಲ್ಲಿ ಮೇಯಲು ಹೋದ ಎಮ್ಮೆಗಳನನ್ನ ವಾಪಸ್ ಮನೆಗೆ ಕರೆತರಲು ಹೋದ ರೈತ ನೀರು ಪಾಲಾದಂತ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಕೋಡಾಲ ಗ್ರಾಮದ ಹೊರವಲಯದ ಕೃಷ್ಣಾ ನದಿಯಲ್ಲಿ ನಡೆದಿದೆ.
ಕೃಷ್ಣಾ ನದಿ ಬಳಿ ತೆರಳಿದ್ದ ರೈತ ಕಣ್ಮರೆ... ಮೊಸಳೆಗಳು ಎಳೆದೊಯ್ದಿರುವ ಶಂಕೆ - Kodala village of Vadagera Taluk
ನದಿಯ ನಡುಗಡ್ಡೆಯಲ್ಲಿ ಮೇಯಲು ಹೋದ ಎಮ್ಮೆಗಳನನ್ನ ವಾಪಸ್ ಮನೆಗೆ ಕರೆದೊಯ್ಯಲು ತೆರಳಿದ್ದ ರೈತ ನೀರು ಪಾಲಾದಂತ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಕೋಡಾಲ ಗ್ರಾಮದ ಹೊರವಲಯದ ಕೃಷ್ಣಾ ನದಿಯಲ್ಲಿ ನಡೆದಿದೆ. ಅಲ್ಲದೆ, ಮೊಸಳೆಗಳು ರೈತನನ್ನು ಎಳೆದೊಯ್ದಿರುವ ಶಂಕೆಯೂ ವ್ಯಕ್ತವಾಗಿದೆ.
ಕೋಡಾಲ ಗ್ರಾಮದ ರೈತ ಮಲಕನಗೌಡ ಎಂಬುವವರೇ ಗ್ರಾಮದ ಹೊರವಲಯದ ಕೃಷ್ಣಾ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ವ್ಯಕ್ತಿ. ನೀರಿನಲ್ಲಿ ಇಳಿದಿದ್ದ ಎಮ್ಮೆಗಳನ್ನು ಹೊರಗೆ ಹೊಡೆಯಲು ಮುಂದಾದಾಗ ಮೊಸಳೆಗಳು ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಕೃಷ್ಣಾ ನದಿಯಲ್ಲಿ ಮೊಸಳೆಗಳ ದಾಳಿಯಿಂದ ಸಾಕಷ್ಟು ಜನ ತಮ್ಮ ಜೀವ ಕಳೆದುಕೊಂಡಿದ್ದಾರೆ. ಆದರೆ, ಜಿಲ್ಲಾಡಳಿತ ಮಾತ್ರ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಸದ್ಯ ಸ್ಥಳೀಯ ಮಿನುಗಾರರಿಂದ ಮೃತ ಮಲಕನಗೌಡ ಮೃತದೇಹದ ಶೋಧ ಕಾರ್ಯ ನಡೆದಿದೆ.
ಜಿಲ್ಲೆಯ ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಇಲ್ಲಿಯವರೆಗೆ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಆಗಮಿಸದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.