ಕರ್ನಾಟಕ

karnataka

ETV Bharat / state

ಶಿಕ್ಷಕರ ಅರ್ಹತಾ ಪರೀಕ್ಷೆ : ಯಾದಗಿರಿಯಲ್ಲಿ 10,937 ಅಭ್ಯರ್ಥಿಗಳು ಹಾಜರು - Karnataka Teacher Eligibility Test

ಯಾದಗಿರಿ ಜಿಲ್ಲೆಯ ನಿಗದಿತ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್​ನೊಂದಿಗೆ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯು ಪರೀಕ್ಷೆಯು ನಡೆಯಿತು.

tet-exam-held-at-yadagiri
ಶಿಕ್ಷಕರ ಅರ್ಹತಾ ಪರೀಕ್ಷೆ : 10,937 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಿ

By

Published : Nov 6, 2022, 10:40 PM IST

ಯಾದಗಿರಿ :ಭಾನುವಾರ ಜಿಲ್ಲೆಯ ನಿಗದಿತ ಕೇಂದ್ರಗಳಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆಯಿತು. ಒಂದರಿಂದ 5ನೇ ತರಗತಿವರೆಗಿನ ಶಿಕ್ಷಕರ ಅರ್ಹತಾ ಪರೀಕ್ಷೆಯು ಬೆಳಿಗ್ಗೆ 9:30ರಿಂದ ಮಧ್ಯಾಹ್ನ 12 ಗಂಟೆವರೆಗೆ ನಡೆಯಿತು. ಇದರಲ್ಲಿ ನೋಂದಣಿ ಮಾಡಿದ್ದ 5,295 ಪರೀಕ್ಷಾರ್ಥಿಗಳ ಪೈಕಿ, 455 ಗೈರಾಗಿದ್ದು, 4,840 ಪರೀಕ್ಷಾರ್ಥಿಗಳು ಹಾಜರಾಗಿದ್ದರು.

ಆರರಿಂದ 8ನೇ ತರಗತಿವರೆಗಿನ ಎರಡನೇ ಪರೀಕ್ಷೆ ಮಧ್ಯಾಹ್ನ 2:30ರಿಂದ ಸಂಜೆ 4:30ರವರೆಗೆ ನಡೆಯಿತು. ಇದರಲ್ಲಿ ನೋಂದಣಿ ಮಾಡಿದ್ದ 6,528 ಪರೀಕ್ಷಾರ್ಥಿಗಳ ಪೈಕಿ, 6,097 ಪರೀಕ್ಷಾರ್ಥಿಗಳು ಹಾಜರಾಗಿ, 431 ಗೈರಾಗಿದ್ದರು. ಎರಡೂ ಪರೀಕ್ಷೆಗಳ ಒಟ್ಟು 11,823 ಪರೀಕ್ಷಾರ್ಥಿಗಳ ಪೈಕಿ 10,937 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 886 ಪರೀಕ್ಷಾರ್ಥಿಗಳು ಗೈರಾಗಿದ್ದರು.

ಶಿಕ್ಷಕರ ಅರ್ಹತಾ ಪರೀಕ್ಷೆ ಬಗ್ಗೆ ಎಸ್​​ಪಿ ಮಾಹಿತಿ

ಬಿಗಿ ಬಂದೋಬಸ್ತ್: ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್‌ ಮತ್ತು ಕೈ ಗಡಿಯಾರದ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಕೊಠಡಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷೆ ಆರಂಭಗೊಳ್ಳುವ ಒಂದು ಗಂಟೆ ಮುಂಚೆಯೇ ವಿಡಿಯೋಗ್ರಾಫರ್ ಹಾಜರಿದ್ದರು. ಗೇಟ್‌ನ ಮುಂಭಾಗದಿಂದ ಹಿಡಿದು ಪರೀಕ್ಷೆ ನಡೆಯುವ ಕೊಠಡಿಯೊಳಗೆ ಚಿತ್ರೀಕರಣ ಮಾಡುತ್ತಿದ್ದರು. ಯಾವುದೇ ರೀತಿ ಅಕ್ರಮ ನಡೆಯದಂತೆ ಶಿಕ್ಷಣ ಇಲಾಖೆ ಈ ಕ್ರಮ ಕೈಗೊಂಡಿದ್ದು, ಎಲ್ಲಾ ಬಿಗಿ ಬಂದೋಬಸ್ತ್ ಮಧ್ಯೆ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಿತು.

ಪರೀಕ್ಷೆಯ ಬಂದೋಬಸ್ತ್​ಗೆ ಒಬ್ಬರು ಡಿವೈಎಸ್ಪಿ, ಐವರು ಸಿಪಿಐಗಳು, 80 ಜನ ಕಾನ್ಸ್​ಟೇಬಲ್‌ಗಳನ್ನು ನಿಯೋಜಿಸಲಾಗಿತ್ತು. ಪರೀಕ್ಷಾ ಕೇಂದ್ರದ 200 ಮೀ. ಅಂತರದಲ್ಲಿ ನಿಷೇಧಾಜ್ಞೆ ವಿಧಿಸಲಾಗಿತ್ತು.

ಇದನ್ನೂ ಓದಿ :ಕಲಬುರಗಿ: ಸದ್ಯದಲ್ಲೇ ಹಸೆಮಣೆ ಏರಬೇಕಿದ್ದ ಸರ್ಕಾರಿ ನೌಕರ ಆತ್ಮಹತ್ಯೆ

ABOUT THE AUTHOR

...view details