ಕರ್ನಾಟಕ

karnataka

ETV Bharat / state

ಮುಳ್ಳುಗಂಟಿಗಳಿಂದ ಕೂಡಿದ ಐತಿಹಾಸಿಕ ಕಲ್ಲಯ್ಯ ಶರಣರ ದೇವಸ್ಥಾನ: ಸ್ವಚ್ಛತೆಗೆ ಮುಂದಾದ ಯುವ ಬ್ರಿಗೇಡ್

ಸುರಪುರ ತಾಲೂಕಿನ ಹಾವಿನಾಳ ಸಮೀಪದಲ್ಲಿನ ಐತಿಹಾಸಿಕ ಕಲ್ಲಯ್ಯ ಶರಣರ ದೇವಸ್ಥಾನ ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಪಾಳು ಬಿದ್ದಂತಾಗಿದೆ. ಈ ಹಿನ್ನೆಲೆ ಯುವ ಬ್ರಿಗೇಡ್ ಕಾರ್ಯಕರ್ತರು ಸ್ವಚ್ಛತೆಗೆ ಮುಂದಾಗಿದ್ದಾರೆ.

temple cleaning by surpur yuva brigade activists
ಐತಿಹಾಸಿಕ ಕಲ್ಲಯ್ಯ ಶರಣರ ದೇವಸ್ಥಾನ

By

Published : Sep 6, 2020, 5:07 PM IST

ಸುರಪುರ: 12ನೇ ಶತಮಾನದ ಬಸವಾದಿ ಶರಣರ ಸಮಕಾಲೀನರಾದ ಹಾವಿನಾಳ ಕಲ್ಲಯ್ಯ ಶರಣರ ದೇವಸ್ಥಾನವು ಶಿಥಿಲಾವಸ್ಥೆಯಲ್ಲಿರುವುದನ್ನು ಗುರುತಿಸಿ ಯುವ ಬ್ರಿಗೇಡ್ ಕಾರ್ಯಕರ್ತರು ದೇವಸ್ಥಾನ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಐತಿಹಾಸಿಕ ಕಲ್ಲಯ್ಯ ಶರಣರ ದೇವಸ್ಥಾನ
ಸುಮಾರು ವರ್ಷಗಳಿಂದ ದೇವಸ್ಥಾನ ನಿರ್ಲಕ್ಷ್ಯಕ್ಕೊಳಗಾಗಿದ್ದು ದೇವಸ್ಥಾನದ ಗೋಡೆಯ ಕಲ್ಲುಗಳು ಕೂಡ ಉರುಳಿಬಿದ್ದಿವೆ. ಅಲ್ಲ ದೆ ದೇವಸ್ಥಾನದ ಸುತ್ತಮುತ್ತಲು ಗಿಡಗಂಟಿಗಳು ಬೆಳೆದು ದೇವಸ್ಥಾನದ ಆವರಣ ಮುಳ್ಳು ಗಿಡಗಳೆಂದು ತುಂಬಿಕೊಂಡಿತ್ತು. ಇದನ್ನು ಗುರುತಿಸಿ ಯುವಪಡೆ ಸ್ವಚ್ಛತಾ ಕಾರ್ಯ ಆರಂಭಿಸಿದೆ. ಸ್ವಚ್ಛತಾ ಕಾರ್ಯ ತಂಡದ ನೇತೃತ್ವ ವಹಿಸಿದ್ದ ಬಸವರಾಜ್ ಮೇಲಿನಮನಿ ಮಾತನಾಡಿ, ಸರಕಾರದ ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಶಿಥಿಲಾವಸ್ಥೆಗೆ ಒಳಗಾಗಿರುವ ಐತಿಹಾಸಿಕ ದೇವಸ್ಥಾನ ತುಂಬಾ ಹೆಸರುವಾಸಿಯಾಗಿದ್ದು, ದೇವಸ್ಥಾನವನ್ನು ಸ್ವಚ್ಛಗೊಳಿಸುವ ಮೂಲಕ ಮುಂದಿನ ಪೀಳಿಗೆಗೂ ದೇವಸ್ಥಾನವನ್ನು ಉಳಿಸಿಕೊಡುವ ಜವಾಬ್ದಾರಿ ಎಲ್ಲರ ಮೇಲಿದೆ ಇದನ್ನು ಅರಿತು ಇವಾ ಬ್ರಿಗೇಡ್ ವತಿಯಿಂದ ಇಂದು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದು ಜೊತೆಗೆ ಸರಕಾರ ಕೂಡಲೇ ದೇವಸ್ಥಾನ ಜೀರ್ಣೋದ್ಧಾರಗೊಳಿಸಿ ಹಾವಿನಾಳ ಕಲ್ಲಯ್ಯನವರ ಭಕ್ತರಿಗೆ ದರ್ಶನಕ್ಕೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿದರು.

ABOUT THE AUTHOR

...view details