ಗುರುಮಠಕಲ್: ಜಯ ಕರ್ನಾಟಕ ಸಂಘಟನೆ ಗುರುಮಠಕಲ್ ತಾಲೂಕು ಘಟಕ ವತಿಯಿಂದ ನಿನ್ನೆ ಸಂಘಟನೆ ಕಾರ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಗುರುಮಠಕಲ್: ಜಯ ಕರ್ನಾಟಕ ಸಂಘಟನೆ ವತಿಯಿಂದ ಶಿಕ್ಷಕರ ದಿನಾಚರಣೆ - ಜಯ ಕರ್ನಾಟಕ ಸಂಘಟನೆ ವತಿಯಿಂದ ಶಿಕ್ಷಕರ ದಿನಾಚರಣೆ
ಜಯ ಕರ್ನಾಟಕ ಸಂಘಟನೆ ಗುರುಮಠಕಲ್ ತಾಲೂಕು ಘಟಕ ವತಿಯಿಂದ ನಿನ್ನೆ ಸಂಘಟನೆ ಕಾರ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗುರುಮಠಕಲ್ ತಾಲೂಕು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷರಾದ ನಾಗೇಶ ಗದ್ದಿಗಿ ಮಾತಾನಾಡಿ, ನಮ್ಮನ್ನು ತಿದ್ದಿ ತೀಡಿ ಅನಕ್ಷರತೆಯಿಂದ ಅಕ್ಷರರನ್ನಾಗಿ ಮಾಡಿ ಸಮಾಜದಲ್ಲಿ ಒಂದು ಗೌರವ ಸ್ಥಾನ ಪಡೆಯಲು ಕಾರಣರಾದ ಪೂಜ್ಯ ಗುರುವೃಂದಕ್ಕೆ ಗೌರವ ಸಲ್ಲಿಸುವ ದಿನವಿದು. ಒಬ್ಬ ಸಾಮಾನ್ಯ ಶಿಕ್ಷಕರು ಭಾರತದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಆಗಿ ಸೇವೆ ಸಲ್ಲಿಸಿದ್ದಾರೆ ಅಂದರೆ ಅವರ ಕೊಡುಗೆ ದೇಶಕ್ಕೆ ಎಷ್ಟಿದೆ ಎಂಬುದನ್ನು ನಾವೆಲ್ಲಾ ತಿಳಿದುಕೊಳ್ಳಬೇಕು. ನಮ್ಮ ದೇಶದಲ್ಲಿ ಗುರುಗಳಿಗೆ ದೇವರ ಸ್ಥಾನವಿದೆ. ಪ್ರತಿಯೊಬ್ಬರ ಬಾಳಿನಲ್ಲಿ ಜ್ಞಾನದ ದೀಪ ಹಚ್ಚುವರೇ ಗುರುಗಳು, ಹಾಗಾಗಿ ಈ ದಿನವನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಕಾರ್ಯಾಧ್ಯಕ್ಷರಾದ ಲಾಲಪ್ಪ ತಲಾರಿ, ಯುವ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಮೇಧಾ, ಖಜಾಂಚಿ ಎಸ್.ಪಿ ಮಹೇಶ ಗೌಡ, ಆಟೋ ಘಟಕದ ಅಧ್ಯಕ್ಷರಾದ ನಾರಾಯಣ ಮಜ್ಜಿಗೆ, ಶಂಕರ ನಾಗವೋಳ, ರಮೇಶ್ ಹೂಗಾರ, ವಿಶ್ವನಾಥರೆಡ್ಡಿ, ಸುನೀಲ್ ಮಜ್ಜಿಗೆ, ಫೀರ್ ಅಹ್ಮದ್ ಗೋಪಾಲ್ ಮಜ್ಜಿಗೆ, ಸುನೀಲ್ ಮೇಧಾ, ರಾಜಕುಮಾರ ಮತೂರ್, ಮಹೇಶ್ ಮಡಿವಾಳ, ವಿಜಯ್ ಮತುರ್ ಯಲ್ಲಪ್ಪ ಯಾದವ್, ಬಲರಾಮ ತುಳುಸಿ ಹಾಗೂ ಹಲವು ಮುಖಂಡರು, ಸಂಘಟನೆಯ ಕಾರ್ಯಕರ್ತರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.