ಕರ್ನಾಟಕ

karnataka

ETV Bharat / state

ಶಾಲೆಗೆ ಹಾಜರಾಗದೆ 2 ವರ್ಷದಿಂದ ವೇತನ ಪಡೆದ ಶಿಕ್ಷಕಿ: ಮುಖ್ಯ ಶಿಕಕ್ಷನ ಕುಮ್ಮಕ್ಕು ಆರೋಪ - Maddaraki village of Shahpur taluk

ಕಳೆದ ಎರಡು ವರ್ಷದಿಂದ ಶಾಲೆಗೆ ಹಾಜರಾಗದೆ ಶಿಕ್ಷಕಿಯೊಬ್ಬರು ಸರ್ಕಾರದಿಂದ ಸಂಬಳ ಪಡೆದಿರುವ ಆರೋಪ ಶಹಾಪುರದಲ್ಲಿ ಕೇಳಿ ಬಂದಿದೆ.

teacher  has been paid for 2 years without attending school
ಶಾಲೆಗೆ ಹಾಜರಾಗದೇ 2 ವರ್ಷದಿಂದ ವೇತನ ಪಡೆದ ಶಿಕ್ಷಕಿ

By

Published : Feb 5, 2021, 10:47 PM IST

ಸುರಪುರ: ಶಾಲೆಗೆ ಹಾಜರಾಗದೆ ಶಿಕ್ಷಕ ಹಾಗೂ ಶಿಕ್ಷಕಿ ಕಳೆದ ಎರಡು ವರ್ಷಗಳಿಂದ ಪ್ರತಿ ತಿಂಗಳ ಸಂಬಳ ಪಡೆದಿರುವ ಆರೋಪ ಶಹಾಪುರ ತಾಲೂಕಿನ ಮದ್ದರಕಿ ಗ್ರಾಮದಲ್ಲಿ ಕೇಳಿ ಬಂದಿದೆ.

ಶಾಲೆಗೆ ಹಾಜರಾಗದೆ 2 ವರ್ಷದಿಂದ ವೇತನ ಪಡೆದ ಶಿಕ್ಷಕಿ: ಆರೋಪ

ಈ ಬಗ್ಗೆ ಮಾತನಾಡಿರುವ ಡಿಎಸ್ಎಸ್ ಸಂಘಟನೆಯ ಶಿವಪುತ್ರ ಜವಳಿ, ಪ್ರೌಢ ಶಾಲೆಗೆ ಕಳೆದ 2008ರಲ್ಲಿ ನೃತ್ಯ ಶಿಕ್ಷಕಿಯಾಗಿ ಶೈಲಾ ಎನ್.ಕೆ. ಬಂದಿದ್ದರು. ಮದುವೆ ಆದ ನಂತರ ಪದೇ ಪದೆ ರಜೆ ಹಾಕಿದ್ದಾರೆ. ಅಲ್ಲದೆ ಕಳೆದ ಎರಡು ವರ್ಷಗಳಿಂದ ಒಂದೇ ಒಂದು ದಿನ ಶಾಲೆಗೆ ಹಾಜರಾಗದೆ ಪ್ರತಿ ತಿಂಗಳು ಸಂಬಳ ಪಡೆದಿದ್ದಾರೆ ಎಂಬ ಆರೋಪಿಸಿದ್ದಾರೆ.

ಇನ್ನು ಮುಖ್ಯ ಶಿಕ್ಷಕ ವಿಜಯ್ ಆಶ್ರಿತ್ ಶಿಕ್ಷಕಿಗೆ ವೇತನ ನೀಡಿ ಶಿಕ್ಷಣ ಇಲಾಖೆಗೆ ವಂಚಿಸಿದ್ದಾರೆ ಎಂಬ ಆರೋಪವಿದೆ. ಈ ಬಗ್ಗೆ ಬಿಇಒ ರುದ್ರಗೌಡ ಪಾಟೀಲ್​ ಮುಖ್ಯ ಶಿಕ್ಷಕರಿಗೆ ಮೂರು ಬಾರಿ ನೋಟಿಸ್ ಕೊಟ್ಟಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ.

ABOUT THE AUTHOR

...view details