ಸುರಪುರ(ಯಾದಗಿರಿ):ಮೊನ್ನೆಯಷ್ಟೇ ನಿಧನರಾದ ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಅವರಿಗೆ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುರಪುರ ತಾಲೂಕು ಘಟಕದಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.
ನಿತ್ಯೋತ್ಸವ ಕವಿಗೆ ಸುರಪುರ ಪತ್ರಕರ್ತರಿಂದ ಶ್ರದ್ಧಾಂಜಲಿ - ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್
ಅಗಲಿದ ಕನ್ನಡದ ಹೆಸರಾಂತ ಕವಿ ನಿಸಾರ್ ಅಹಮ್ಮದ್ ಅವರಿಗೆ ಸುರಪುರ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಿತ್ಯೋತ್ಸವ ಕವಿಗೆ ಸುರಪುರ ಪತ್ರಕರ್ತರ ವತಿಯಿಂದ ಶ್ರದ್ಧಾಂಜಲಿ
ನಗರದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಎರಡು ನಿಮಿಷಗಳ ಕಾಲ ಮೌನಾಚರಣೆ ನಡೆಸಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ನಂತರ ಸಂಘದ ಅಧ್ಯಕ್ಷ ರಾಜು ಕುಂಬಾರ ಮಾತನಾಡಿ, ಕೆ.ಎಸ್.ನಿಸಾರ್ ಅಹಮದ್ ಅವರು ಈ ನಾಡು ಕಂಡ ಮೇರು ಸಾಹಿತಿಗಳಲ್ಲಿ ಒಬ್ಬರು. ಅವರ ಚಿಂತನೆಗಳು ತುಂಬಾ ವೈಚಾರಿಕವಾಗಿದ್ದವು. ಅಲ್ಲದೆ ಅವರು ಬದುಕಿನುದ್ದಕ್ಕೂ ಕನ್ನಡವೇ ಜಾತಿ ಧರ್ಮ ದೇವರೆಂದು ಜೀವಿಸಿದವರು. ಇಂದು ಅವರು ನಮ್ಮನ್ನೆಲ್ಲ ಅಗಲಿದ್ದರಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ ಎಂದರು.