ಯಾದಗಿರಿ:ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ತಹಶೀಲ್ದಾರ್ ಸಂಗಮೇಶ ಜಿಡಗೆ ಅವರು ನಿಯಮ ಬಾಹಿರವಾಗಿ ವ್ಯಾಪಾರ ನಡೆಸುತ್ತಿದ್ದ ಕೆಲ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ.
ಗುರುಮಠಕಲ್ ಪಟ್ಟಣದಲ್ಲಿ ಅಂಗಡಿಗಳ ಮೇಲೆ ದಾಳಿ ನಡೆಸಿದ ತಹಶೀಲ್ದಾರ್ - Tahsildar to Sangamesh
ಗುರುಮಠಕಲ್ ಪಟ್ಟಣದಲ್ಲಿ ತಹಶೀಲ್ದಾರ್ ಸಂಗಮೇಶ ಜಿಡಗೆ, ನಿಯಮ ಬಾಹಿರವಾಗಿ ವ್ಯಾಪಾರ ನಡೆಸುತ್ತಿದ್ದ ಕೆಲ ಅಂಗಡಿಗಳ ಮೇಲೆ ದಾಳಿ ನಡೆಸಿ,ತುರ್ತು ಸೇವೆ ಅಂಗಡಿಗಳನ್ನ ಬಿಟ್ಟು ಬೇರೆಲ್ಲಾ ಅಂಗಡಿಗಳನ್ನ ಮುಚ್ಚಿಸಿ,ಎಚ್ಚರಿಕೆ ನೀಡಿದ್ದಾರೆ.
ಗುರುಮಠಕಲ್ ಪಟ್ಟಣದಲ್ಲಿ ಅಂಗಡಿಗಳ ಮೇಲೆ ದಾಳಿ ನಡೆಸಿದ ತಹಶೀಲ್ದಾರ್
ಗುರುಮಠಕಲ್ ಪಟ್ಟಣದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿ, ಜನರು ಸಂಚಾರ ಮಾಡುತ್ತಿದ್ದರು. ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು-ಗುಂಪಾಗಿ ವ್ಯವಹಿಸುತ್ತಿದ್ದರು. ಅಲ್ಲದೆ, ಕೆಲ ಅಂಗಡಿಯವರು ನಿಯಮ ಉಲ್ಲಂಘಿಸಿ ವ್ಯಾಪಾರ-ವಹಿವಾಟು ನಡೆಸುತ್ತಿದ್ದವು.
ಈ ಮಾಹಿತಿ ತಿಳಿದ ತಹಶೀಲ್ದಾರ್ ದಾಳಿ ನಡೆಸಿ, ತುರ್ತು ಸೇವೆ ಅಂಗಡಿಗಳನ್ನ ಬಿಟ್ಟು ಬೇರೆಲ್ಲಾ ಅಂಗಡಿಗಳನ್ನ ಮುಚ್ಚಿಸಿ,ಎಚ್ಚರಿಕೆ ನೀಡಿದ್ದಾರೆ.