ಕರ್ನಾಟಕ

karnataka

ETV Bharat / state

ಕರ್ತವ್ಯ ಲೋಪದ ಹಿನ್ನೆಲೆ ಹಾಸ್ಟೆಲ್​ ವಾರ್ಡನ್ ಸೇವೆಯಿಂದ ಅಮಾನತು

ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಾರ್ಡನ್ ಅನಿಲ್ ಕುಮಾರ ಪಂಚಾಳ ಅವರನ್ನ ಕರ್ತವ್ಯ ಲೋಪದ ಹಿನ್ನೆಲೆ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಎಮ್ ಕುರ್ಮಾರಾವ್ ಆದೇಶ ಹೊರಡಿಸಿದ್ದಾರೆ.

By

Published : Jan 3, 2020, 8:02 PM IST

Updated : Jan 3, 2020, 9:00 PM IST

Suspension of warden with background hostel service
ಕರ್ತವ್ಯ ಲೋಪದ ಹಿನ್ನೆಲೆ ಹಾಸ್ಟೆಲ್​ ವಾರ್ಡನ್ ಸೇವೆಯಿಂದ ಅಮಾನತು

ಯಾದಗಿರಿ: ತಾಲೂಕಿನ ಬಂದಳ್ಳಿ ಗ್ರಾಮದ ಬಳಿ ಇರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಾರ್ಡನ್ ಅನಿಲ್​ ಕುಮಾರ ಪಂಚಾಳ ಅವರನ್ನ ಕರ್ತವ್ಯ ಲೋಪದ ಹಿನ್ನೆಲೆ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಎಮ್ ಕುರ್ಮಾರಾವ್ ಆದೇಶ ಹೊರಡಿಸಿದ್ದಾರೆ.

ನಿನ್ನೆ ರಾತ್ರಿ ಈ ವಸತಿ ನಿಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ದಿಢೀರ್ ಭೇಟಿ ನೀಡಿದಂತಹ ಸಂದರ್ಭದಲ್ಲಿ ಅಲ್ಲಿನ ಅವ್ಯವಸ್ಥೆ ಕಂಡು ಹಾಸ್ಟೆಲ್ ವಾರ್ಡನ್​ಗೆ ಸ್ಥಳಕ್ಕೆ ಬರುವಂತೆ ಸೂಚಿಸಿದ್ದರು. ವಾರ್ಡನ್ ಅನಿಲಕುಮಾರಗೆ ಸುಧೀರ್ಘ ಕಾಲ ಕರೆ ಮಾಡಿದರೂ ಸಹ ಫೋನ್ ಚಾಲ್ತಿಯಲ್ಲಿರದೇ ಸಚಿವರ ಭೇಟಿ ವೇಳೆ ಉದ್ದೇಶಪೂರ್ವಕವಾಗಿ ವಾರ್ಡನ್ ಗೈರು ಇರುವುದು ಕಂಡುಬಂದಿತ್ತು.

ಹಾಗಾಗಿ ವಾರ್ಡನ್ ಅನಿಲ್​ ಕುಮಾರ್ ಕರ್ತವ್ಯ ಲೋಪ, ಅಶಿಸ್ತಿನ ವರ್ತನೆ, ಬೇಜವಾಬ್ದಾರಿತನದ ನಡವಳಿಕೆ ಹಿನ್ನೆಲೆಯಿಂದಾಗಿ ಜಿಲ್ಲಾಧಿಕಾರಿ ಎಮ್ ಕುರ್ಮಾರಾವ್ ಅವರು ಅನಿಲ್​ ಕುಮಾರ ಪಂಚಾಳ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

Last Updated : Jan 3, 2020, 9:00 PM IST

ABOUT THE AUTHOR

...view details